ಶಂಕರ ನಾರಾಯಣ ಹೊಳ್ಳ
ಬಂಟ್ವಾಳ, ಮೇ 9: ಪಾಣೆಮಂಗಳೂರು ಗ್ರಾಮದ ಬೊಂಡಾಲ ಪರ್ಲಮಜಲಿನ ನಿವೃತ್ತ ಮುಖ್ಯೋಪಾಧ್ಯಾಯ ಶಂಕರನಾರಾಯಣ ಹೊಳ್ಳ (87) ಅವರು ಅಲ್ಪಕಾಲದ ಅಸೌಖ್ಯದ ಬಳಿಕ ಪರ್ಲನಕಲು ಸ್ವಗೃಹದಲ್ಲಿ ನಿಧನರಾದರು. ಮೃತರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಾದ ಬರಿಮಾರ್, ಅರಂತೋಡು, ಬೋಳಂಗಡಿ, ಪಾಣೆಮಂಗಳೂರು, ಸಜೀಪಮೂಡ, ಸಜೀಪನಡು ಮುಂತಾದ ಕಡೆಗಳಲ್ಲಿ 1954ರಿಂದ 1991ರವರೆಗೆ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿರುತ್ತಾರೆ. ನಿವೃತ್ತಿ ನಂತರ ಪ್ರಗತಿಪರ ಕೃಷಿಕರಾಗಿದ್ದ ಅವರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ವಿದ್ಯಾರ್ಥಿ ಸಮೂಹವನ್ನು ಅಗಲಿರುತ್ತಾರೆ.
Next Story