ಕಾರು-ಮಿನಿ ಲಾರಿ ನಡುವೆ ಢಿಕ್ಕಿ: ಕಾಂಗ್ರೆಸ್ ಮುಖಂಡನಿಗೆ ಗಂಭೀರ ಗಾಯ
ಪುತ್ತೂರು: ಕಾರು ಮತ್ತು ಮಿನಿ ಲಾರಿಯೊಂದರ ನಡುವೆ ಢಿಕ್ಕಿ ಸಂಭವಿಸಿ ಕಾಂಗ್ರೆಸ್ ಹಾಗೂ ಬಿಲ್ಲವ ಸಂಘದ ಮುಖಂಡರೊಬ್ಬರು ಗಂಭೀರ ಗಾಯಗೊಂಡ ಘಟನೆ ಪುತ್ತೂರು ನಗರದ ಹೊರವಲಯದ ಕೆಮ್ಮಿಂಜೆ ಗ್ರಾಮದ ಬೆದ್ರಾಳ ಎಂಬಲ್ಲಿ ಗುರುವಾರ ಸಂಜೆ ಸಂಭವಿಸಿದೆ.
ಪುತ್ತೂರು ತಾಲೂಕಿನ ನರಿಮೊಗ್ರು ನಿವಾಸಿ, ಪುತ್ತೂರು ಬಿಲ್ಲವ ಸಂಘದ ಮಾಜಿ ಉಪಾಧ್ಯಕ್ಷರಾದ ಕಾಂಗ್ರೆಸ್ ಮುಖಂಡ ವೇದನಾಥ ಸುವರ್ಣ ಗಾಯಗೊಂಡವರು. ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ.
ವೇದನಾಥ ಸುವರ್ಣ ಅವರು ಚಲಾಯಿಸಿಕೊಂಡು ಹೋಗುತ್ತಿದ್ದ ನ್ಯಾನೋ ಕಾರು ಮತ್ತು 407 ಲಾರಿ ನಡುವೆ ಬೆದ್ರಾಳ ಸೇತುವೆ ಬಳಿ ಪುತ್ತೂರು ಕಾಣಿಯೂರು ರಸ್ತೆಯಲ್ಲಿ ಢಿಕ್ಕಿ ಸಂಭವಿಸಿದೆ.
Next Story