ಕೋಟ: ದೇವೇಗೌಡ ದಂಪತಿಯಿಂದ ಅಮೃತೇಶ್ವರಿ ದೇವಳದಲ್ಲಿ ವಿಶೇಷ ಪೂಜೆ
ಕುಂದಾಪುರ, ಮೇ 10: ಪ್ರಕೃತಿ ಚಿಕಿತ್ಸೆಗಾಗಿ ಕಾಪುವಿಗೆ ಆಗಮಿಸಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ದಂಪತಿ ಇಂದು ಕೋಟದ ಅಮೃತೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದರು.
ಇಂದು ಮಧ್ಯಾಹ್ನ ದೇವಳಕ್ಕೆ ಆಗಮಿಸಿದ ದೇವೇಗೌಡ, ಅವರ ಪತ್ನಿ ಚೆನ್ನಮ್ಮ ಮಧ್ಯಾಹ್ನದ ವಿಶೇಷ ಪೂಜೆಯಲ್ಲಿ ಭಾಗಿಯಾದರು. ಮೊಮ್ಮಗನ ಮದುವೆ ಆಮಂತ್ರಣ ಪತ್ರಿಕೆ ಇಟ್ಟು ಪೂಜೆ ಸಲ್ಲಿಸಿದರು.
ಮೇ 16ರ ವರೆಗೆ ಕಾಪುವಿನಲ್ಲಿ ತಂಗಲಿರುವ ದೇವೇಗೌಡ ದಂಪತಿ, ಉಡುಪಿಯ ಧಾರ್ಮಿಕ ಕ್ಷೇತ್ರಗಳ ದರ್ಶನ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
Next Story