ಬಜೆ ಅಣೆಕಟ್ಟಿಗೆ ಸಚಿವೆ ಜಯಮಾಲ ಭೇಟೆ
ಉಡುಪಿ, ಮೇ 10: ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲ ಶುಕ್ರವಾರ ಉಡುಪಿ ನಗರಸಭೆಗೆ ನೀರು ಪೂರೈಕೆ ಮಾಡುವ ಬಜೆ ಅಣೆಕಟ್ಟಿೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಚಿವರು ಬಜೆ ಅಣೆಕಟ್ಟಿನಿಂದ ನಗರಕ್ಕೆ ನೀರು ಪೂರೈಕೆ ಮಾಡುವ ಸ್ಥಳಗಳಳ ಪರಿಶೀಲನೆ ನಡೆಸಿ, ಡ್ರೆಡ್ಜಿಂಗ್ ನಡೆಯುವ ಭಂಡಾರಿಬೆಟ್ಟು ಹಾಗೂ ಪುತ್ತಿಗೆ ಸೇತುವೆ ಪ್ರದೇಶಗಳಿಗೂ ತೆರಳಿ ನದಿಯಲ್ಲಿರುವ ನೀರಿನ ಮಟ್ಟನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಮಹೇಶ್ವರ ರಾವ್, ಸಚಿವರ ಆಪ್ತ ಕಾರ್ಯದರ್ಶಿ ಡಾ.ಉದಯ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
Next Story