ವಂ.ಸ್ಟೀವನ್ ಫೆರ್ನಾಂಡಿಸ್‌ರಿಗೆ ಗುರುದೀಕ್ಷೆ
ಶಿರ್ವ, ಮೇ 10: ಪಾಂಬೂರು ಪವಿತ್ರ ಶಿಲುಬೆಯ ದೇವಾಲಯದಲ್ಲಿ ಬುಧವಾರ ವಂ.ಸ್ಟೀವನ್ ಫೆರ್ನಾಂಡಿಸ್‌ರಿಗೆ ಗುರುದೀಕ್ಷೆ ನೀಡಲಾಯಿತು.
ಉಡುಪಿ ಧರ್ಮಪ್ರಾಂತ್ರದ ಧರ್ಮಾಧ್ಯಕ್ಷ ಅತೀ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೋ ಗುರುದೀಕ್ಷಾ ವಿಧಿಗಳನ್ನು ನೆರವೇರಿಸಿ ಆಶೀರ್ವಚಿಸಿದರು.
ಈ ಸಂದರ್ಭದಲ್ಲಿ ಪವಿತ್ರ ಶಿಲುಬೆಯ ದೇವಾಲಯದ ಪ್ರಧಾನ ಧರ್ಮಗುರು ರೆ.ಫಾ.ಪಾವ್ಲ್ ರೇಗೋ, ಶಿರ್ವ ಆರೋಗ್ಯಮಾತಾ ದೇವಾಲಯದ ಪ್ರಧಾನ ಧರ್ಮಗುರು ರೆ.ಫಾ.ಡೇನಿಸ್ ಡೇಸಾ, ಫಾ.ಸ್ಟೇನಿ ಬಿ.ಲೋಬೊ, ಫಾ. ಜೋಸೆಫ್ ಮಾರ್ಟಿಸ್, ಫಾ.ಭ್ಯಾಪ್ಟಿಸ್ಟ್ ಮಿನೇಜಸ್ ಹಾಗೂ 55 ಧರ್ಮ ಕೇಂದ್ರಗಳ ಧರ್ಮಗುರುಗಳು ಉಪಸ್ಥಿತರಿದ್ದರು.
Next Story