ಕೋಟ ಅಮೃತೇಶ್ವರಿ ದೇವಸ್ಥಾನಕ್ಕೆ ದೇವೇಗೌಡ ದಂಪತಿ
ಕೋಟ, ಮೇ 10: ಕಾಪು ಸಮೀಪದ ಮೂಳೂರಿನ ರೆಸಾರ್ಟ್ ಒಂದರಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಪತ್ನಿ ಚೆನ್ನಮ್ಮ ಅವರೊಂದಿಗೆ ಶುಕ್ರವಾರ ಅಪರಾಹ್ನ ಕೋಟದ ಅಮೃತೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಜಿಲ್ಲೆಯ ಉತ್ತರ ಭಾಗದಲ್ಲಿ ಪ್ರಸಿದ್ಧಿಯನ್ನು ಪಡೆದಿರುವ ಅಮೃತೇಶ್ವರಿ ದೇವಿಯ ದರ್ಶನಕ್ಕೆ ಶುಕ್ರವಾರದಂದು ಭಾರೀ ಸಂಖ್ಯೆಯ ಜನ ಅದರಲ್ಲೂ ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಸೇರುತ್ತಾರೆ.
ದೇವಸ್ಥಾನಕ್ಕೆ ಭೇಟಿ ನೀಡಿದ ದೇವೇಗೌಡ-ಚೆನ್ನಮ್ಮ ದಂಪತಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಮಧ್ಯಾಹ್ನದ ವೇಳೆ ನಡೆಯುವ ಮಹಾಪೂಜೆಯ ಸಂದರ್ಭದಲ್ಲಿ ತಮ್ಮ ಮೊಮ್ಮಗನ ಮದುವೆಯ ಆಮಂತ್ರಣ ಪತ್ರಿಕೆಯ ಕಟ್ಟನ್ನು ಇಟ್ಟು ದೇವಿಯ ಆಶೀರ್ವಾದ ಬೇಡಿದರು.
ಆಯುರ್ವೇದ ತಜ್ಞ ಡಾ.ತನ್ಮಯ ಗೋಸ್ವಾಮಿ ನೇತೃತ್ವದಲ್ಲಿ ಮೂಳೂರಿನ ಸಾಯಿರಾಧ ಹೆರಿಟೇಜ್ ರೆಸಾರ್ಟ್‌ನಲ್ಲಿ ಆಯುರ್ವೇದ ಹಾಗೂ ಪ್ರಕೃತಿ ಚಿಕಿತ್ಸೆ ಪಡೆಯುತ್ತಿರುವ ದೇವೇಗೌಡ ದಂಪತಿ ಮೇ 16ರವರೆಗೆ ರೆಸಾರ್ಟ್‌ನಲ್ಲಿ ರುತ್ತಾರೆ.
Next Story