ಬೃಹತ್ ಧರ್ಮನಾಥ ಜಾರಂದಾಯ ದೈವದ ಮೂರ್ತಿ ನಿರ್ಮಾಣ
ಹಿರಿಯಡ್ಕ, ಮೇ 10: ಮಂಗಳೂರಿನ ಕುಡುಪು ಶ್ರೀಅನಂತಪದ್ಮನಾಭ ದೇವ ಸ್ಥಾನದಲ್ಲಿ ಮೇ 17ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ದೈವಕ್ಕೆ ಒಪ್ಪಿಸುವ ಧರ್ಮನಾಥ ಜಾರಂದಾಯ ಬೃಹತ್ ಮೂರ್ತಿಯನ್ನು ಹಿರಿಯಡ್ಕ ಶ್ರೀಮಾದ್ ನಾಗ ಧರ್ಮೇಂದ್ರ ಶಿಲ್ಪಶಾಲೆಯ ಶಿಲ್ಪಿ ಸ್ಥಪತಿ ಗಣೇಶ್ ಆಚಾರ್ಯ ನೇತೃತ್ವ ದಲ್ಲಿ ನಿರ್ಮಿಸಲಾಗಿದೆ.
ಸುಮಾರು 13 ಅಡಿ ಎತ್ತರ, 3.5 ಹಾಗು 7 ಅಡಿ ಫ್ಲಾಟ್‌ಪಾರ್ಮ್ ಇರುವ ಸುಂದರವಾದ ಧರ್ಮನಾಥ ಜಾರಂದಾಯ ಮೂರ್ತಿಯನ್ನು ಹೆಬ್ಬಲಸು ಮರ ದಿಂದ ಕಲಾತ್ಮಕವಾಗಿ ರಚಿಸಲಾಗಿದೆ. ಸುಮಾರು 2 ತಿಂಗಳಿನಿಂದ 9 ಕೆತ್ತನೆಯ ಕಲಾವಿದರು ಸೇರಿ ಈ ಮೂರ್ತಿಯನ್ನು ನಿರ್ಮಿಸಿದ್ದಾರೆ.
ಈ ಮೂರ್ತಿಯು ಹಿರಿಯಡ್ಕದ ಶಿಲ್ಪ ಶಾಲೆಯಿಂದ ಮಂಗಳೂರಿನತ್ತ ಪ್ರಯಾಣ ಬೆಳೆಸಿದ್ದು, ಮೇ 17ರಂದು ವರ್ಣಮಯವಾಗಿ ರೂಪಗೊಂಡು ಮೂರ್ತಿಯು ಪ್ರತಿಷ್ಠಾಪನೆಗೊಳ್ಳಲಿದೆ ಎಂದು ಸ್ಥಪತಿ ಗಣೇಶ್ ಆಚಾರ್ಯ ತಿಳಿಸಿದ್ದಾರೆ.
Next Story