ಬಿ. ಫಾತೀಮಾ
ಮಂಗಳೂರು, ಮೇ 10: ತಾಲೂಕಿನ ಮಳಲಿಪೇಟೆಯ ನಿವಾಸಿ ದಿ.ಎಂ.ಎಚ್.ಹಸನ್ ಎಂಬವರ ಪತ್ನಿ ಬಿ.ಫಾತೀಮಾ (68) ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಶುಕ್ರವಾರ ಬೆಳಗ್ಗೆ ನಿಧನರಾದರು.
ಮೃತರು ಮೂರು ಗಂಡು ಮಕ್ಕಳು, ಮೂವರು ಹೆಣ್ಣು ಮಕ್ಕಳು, ನಾಲ್ವರು ಸಹೋದರರು, ಓರ್ವ ಸಹೋದರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರನ್ನು ಮಳಲಿಪೇಟೆ ಜುಮ್ಮಾ ಮಸೀದಿ ಬಳಿಯ ವಠಾರದಲ್ಲಿ ಶುಕ್ರವಾರ ಮಧ್ಯಾಹ್ನ ದಫನ್ ಮಾಡಲಾಯಿತು.
ಸಂತಾಪ: ಗುರುಪುರ ರೇಂಜ್ ಮದ್ರಸ ಅಧ್ಯಕ್ಷ ನೌಶಾದ್ ಹಾಜಿ, ಮಳಲಿ ಜುಮ್ಮಾ ಮಸೀದಿ ಉಪಾಧ್ಯಕ್ಷ ಎಂ.ಎ.ಅಬೂಬಕರ್, ಮಾಜಿ ಅಧ್ಯಕ್ಷ ಯೂಸುಫ್ ಹಾಜಿ, ಕೋಶಾಧಿಕಾರಿ ಅಬ್ದುಲ್ ರಝಾಕ್, ಖತೀಬ್ ಇಬ್ರಾಹೀಂ ದಾರಿಮಿ, ಮಸೀದಿಯ ಕಾರ್ಯಕಾರಿ ಸದಸ್ಯ ನಿಸಾರ್ ಅಹ್ಮದ್, ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಅಬ್ದುಲ್ ಅಝೀಝ್, ನ್ಯಾಯವಾದಿ ಅಬ್ದುಲ್ ರಝಾಕ್, ಗಂಜಿಮಠ ಗ್ರಾಪಂ ಸದಸ್ಯ ಅಬ್ದುಲ್ ಹಮೀದ್, ಮನ್ಸೂರ್ ಅಹ್ಮದ್, ಬದರುದ್ದೀನ್, ಅಮೀರ್ ಅಹ್ಮದ್, ಮುಹಮ್ಮದ್ ಇಕ್ಬಾಲ್ ಹಾಗೂ ಮೃತರ ಸಹೋದರರಾದ ಮಳಲಿ ಜುಮ್ಮಾ ಮಸೀದಿ ಅಧ್ಯಕ್ಷ ಮಾಮು ಮನೇಲ್, ಅಬ್ದುಲ್ ರಝಾಕ್ ಸಂತಾಪ ಸೂಚಿಸಿದ್ದಾರೆ.