ಲಂಡನ್‌ನಲ್ಲಿ ಭಾರತೀಯ ಯುವಕನ ಇರಿದು ಕೊಲೆ
ಲಂಡನ್, ಮೇ 10: ಲಂಡನ್‌ನಲ್ಲಿ ಹೈದರಾಬಾದ್ ನಿವಾಸಿಯೋರ್ವರನ್ನು ಅಪರಿಚಿತ ವ್ಯಕ್ತಿಯೋರ್ವ ಬುಧವಾರ ಇರಿದು ಕೊಂದಿದ್ದಾನೆ.
ಮೃತರನ್ನು ಹೈದರಾಬಾದ್ ನಿವಾಸಿ ಮುಹಮ್ಮದ್ ನದೀಮುದ್ದೀನ್ ಎಂಬುದಾಗಿ ಗುರುತಿಸಲಾಗಿದೆ. ಅವರು ಲಂಡನ್‌ನ ಟೆಸ್ಕೊ ಸೂಪರ್‌ಮಾರ್ಕೆಟ್‌ನ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅವರು ಲಂಡನ್‌ನಲ್ಲಿ ಆರು ವರ್ಷಗಳಿಂದ ಕೆಲಸ ಮಾಡುತ್ತಿದ್ದರು.
ನದೀಮುದ್ದೀನ್‌ರನ್ನು ಕೊಂದಿದ್ದು ಓರ್ವ ಏಶ್ಯನ್ ವ್ಯಕ್ತಿ ಎಂಬುದಾಗಿ ಅವರ ಕುಟುಂಬ ಸ್ನೇಹಿತ ಫಹೀಮ್ ಕುರೇಶಿ ಹೇಳಿದ್ದಾರೆ.
ನದೀಮುದ್ದೀನ್ ಕೆಲಸದಿಂದ ವಾಪಸ್ ಮನೆಗೆ ಬಂದಿಲ್ಲ ಎಂಬುದಾಗಿ ಅವರ ಕುಟುಂಬ ಸದಸ್ಯರು ಟೆಸ್ಕೊ ಕಚೇರಿಗೆ ಫೋನ್ ಮಾಡಿ ತಿಳಿಸಿದ ಬಳಿಕ, ವಾಹನ ನಿಲುಗಡೆ ಸ್ಥಳವೊಂದರಲ್ಲಿ ಬಿದ್ದಿದ್ದ ಅವರ ಹೆಣವನ್ನು ಟೆಸ್ಕೊ ಉದ್ಯೋಗಿಗಳು ಪತ್ತೆಹಚ್ಚಿದರು.
Next Story