varthabharthi


ಈ ದಿನ

ಚೀನಾ ಭೂಕಂಪಕ್ಕೆ 60,000 ಮಂದಿ ಬಲಿ

ವಾರ್ತಾ ಭಾರತಿ : 11 May, 2019

1908: ಖ್ಯಾತ ನಾಟಕಕಾರ ಜಾರ್ಜ್ ಬರ್ನಾಡ್ ಷಾರ ‘ಗೆಟಿಂಗ್ ಮ್ಯಾರಿಡ್’ ನಾಟಕ ಲಂಡನ್‌ನಲ್ಲಿ ಇಂದು ಪ್ರಥಮ ಪ್ರದರ್ಶನ ಕಂಡಿತು.

1915: ಅರ್ಮೇನಿಯಾದ ಮೇಲೆ ದಾಳಿ ಮಾಡಿದ ಕ್ರೋವೆಷಿಯನ್ನರು 250 ಜನರನ್ನು ಹತ್ಯೆಗೈದರು.

1925: ಉಝ್ಬೇಕಿಸ್ತಾನ್ ಹಾಗೂ ಕಿರ್ಗಿಸ್ತಾನ್‌ಗಳು ಸೋವಿಯತ್ ಗಣರಾಜ್ಯದ ಸ್ವಾಯತ್ತ ದೇಶಗಳಾದವು.

1928: ಇಟಲಿಯ ಸರ್ವಾಧಿಕಾರಿ ಬೆನಿಟೊ ಮುಸ್ಸೋಲಿನಿ ಇಟಲಿಯಲ್ಲಿ ಮಹಿಳೆಯರ ಎಲ್ಲ ಹಕ್ಕುಗಳ ಮೇಲೆ ನಿರ್ಬಂಧ ಹೇರಿದನು.

1928: ಮಾದಕ ವಸ್ತುಗಳ ಮೇಲೆ ನಿಯಂತ್ರಣ ಹೇರುವ 2ನೇ ಅಂತರ್‌ರಾಷ್ಟ್ರೀಯ ಅಫೀಮು ಕಾನೂನು ಇಂದು ಪರಿಚಯಿಸಲ್ಪಟ್ಟಿತು.

1949: ಅಮೆರಿಕದಲ್ಲಿ ಪ್ರಥಮ ವಿದೇಶಿ ಮಹಿಳಾ ರಾಯಭಾರಿಯಾಗಿ ಭಾರತದ ವಿಜಯಲಕ್ಷ್ಮೀ ಪಂಡಿತ್ ಈ ದಿನ ಅಧಿಕಾರ ಸ್ವೀಕರಿಸಿದರು.

1965: ಇಸ್ರೇಲ್ ಹಾಗೂ ಪಶ್ಚಿಮ ಜರ್ಮನಿ ಮಧ್ಯೆ ರಾಜತಾಂತ್ರಿಕ ಸಂಬಂಧಗಳು ಆರಂಭವಾದವು.

1965: ಸೊವಿಯೆತ್ ಒಕ್ಕೂಟದ ಬಾಹ್ಯಾಕಾಶ ನೌಕೆ ‘ಲೂನ 5’ ಚಂದ್ರನನ್ನು ಸ್ಪರ್ಷಿಸಿತು.

1997: ರಶ್ಯಾ ಹಾಗೂ ಚೆಚೆನ್ಯಾ ಶಾಂತಿ ಒಪ್ಪಂದವೊಂದಕ್ಕೆ ಸಹಿ ಹಾಕುವ ಮೂಲಕ 400 ವರ್ಷಗಳ ಸಂಘರ್ಷಕ್ಕೆ ಅಂತ್ಯ ಹಾಡಿದವು.

2008: ಚೀನಾದ ಸಿಚುವಾನ್ ಪ್ರಾಂತದ ಚೆಂಗ್ಡು ಎಂಬಲ್ಲಿ ಸಂಭವಿಸಿದ ಪ್ರಬಲ ಮಾರಣಾಂತಿಕ ಭೂಕಂಪಕ್ಕೆ ಸುಮಾರು 60,000 ಜನರ ಸಾವಿನ ವರದಿಯಾಗಿದೆ. ರಿಕ್ಟರ್ ಮಾಪಕದಲ್ಲಿ 7.8ನಷ್ಟು ತೀವ್ರತೆಯಲ್ಲಿದ್ದ ಈ ಕಂಪನಕ್ಕೆ ಹಲವು ಬೃಹತ್ ಕಟ್ಟಡಗಳು ನೆಲಸಮಗೊಂಡವು. ಹಲವು ಶಾಲೆಯ ಮಕ್ಕಳು ಕಲ್ಲುಮಣ್ಣಗಳಲ್ಲಿ ಸಮಾಧಿಯಾದರು.

2010: ಲಿಬಿಯಾದ ಟ್ರಿಪೋಲಿಯಲ್ಲಿ ಆಫ್ರಿಕದ ಏರ್‌ಲೈನ್ಸ್‌ನ ವಿಮಾನ ಪತನಕ್ಕೀಡಾಗಿ ವಿಮಾನದಲ್ಲಿದ್ದ 104 ಜನರಲ್ಲಿ 103 ಜನ ಮೃತಪಟ್ಟು ಒಬ್ಬನೇ ಪ್ರಯಾಣಿಕ ಪ್ರಾಣಾಪಾಯದಿಂದ ಪಾರಾದನು.

2017: ಝಿಕಾ ವೈರಸ್‌ನಿಂದ ರಾಷ್ಟ್ರೀಯ ತುರ್ತುಪರಿಸ್ಥಿತಿಯನ್ನು ಘೋಷಿಸಿದ್ದ ಬ್ರೆಝಿಲ್ ಇಂದು ತುರ್ತುಪರಿಸ್ಥಿತಿಯನ್ನು ಕೊನೆಗೊಳಿಸಿತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)