‘ಹಾಪ್ತ್ ಬಾನ್‌ಹಾಪ್’ ಉದ್ಘಾಟನೆ
1917: ಜಾರ್ಜಿಯಾದ ಸಮಾಜವಾದಿ ಪ್ರಜಾಪ್ರಭುತ್ವ ಗಣರಾಜ್ಯ ರಶ್ಯಾದಿಂದ ಮುಕ್ತಗೊಂಡಿತು.
1966: ಇಂಗ್ಲೆಂಡ್‌ನ ಅಧೀನದಲ್ಲಿದ್ದ ಗಯಾನಾ ಸ್ವಾತಂತ್ರ ಘೋಷಿಸಿಕೊಂಡಿತು.
1973: ಬಹರೈನ್ ದೇಶದಿಂದ ಸಂವಿಧಾನ ಅಂಗೀಕಾರ.
1983: ನಾಸಾದಿಂದ ಎಕ್ಸೋಸಾಟ್ ಉಪಗ್ರಹ ಉಡಾವಣೆ.
1991 : ಥಾಯ್ಲೆಂಡ್‌ನ ಬ್ಯಾಂಕಾಕ್‌ನ ಅರಣ್ಯವೊಂದರಲ್ಲಿ ಬೋಯಿಂಗ್ 767 ವಿಮಾನ ಪತನಗೊಂಡ ಪರಿಣಾಮ ವಿಮಾನದಲ್ಲಿದ್ದ 223 ಜನ ಮೃತಪಟ್ಟರು.
2006: ಜಾವಾದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ 5,700 ಜನ ಸಾವಿಗೀಡಾದ ವರದಿಯಾಗಿದೆ. ಸುಮಾರು 2,00,000 ಸಂಖ್ಯೆಯಷ್ಟು ಜನ ನಿರಾಶ್ರಿತರಾದರು.
2006: ಜರ್ಮನಿಯ ಬರ್ಲಿನ್‌ನಲ್ಲಿ ಯುರೋಪಿನ ಅತ್ಯಂತ ದೊಡ್ಡ ರೈಲು ನಿಲ್ದಾಣ ಎಂದು ಹೆಸರಾದ ‘ಹಾಪ್ತ್ ಬಾನ್‌ಹಾಪ್’ ನಿಲ್ದಾಣ ಈ ದಿನ ಉದ್ಘಾಟನೆಗೊಂಡಿತು. 8 ವರ್ಷಗಳ ಕಾಲಾವಧಿಯಲ್ಲಿ ನಿರ್ಮಾಣಗೊಂಡ ಈ ನಿಲ್ದಾಣಕ್ಕೆ 700 ಮಿಲಿಯನ್ ಯುರೋಗಳ ಖರ್ಚು ತಗುಲಿತ್ತು.
2014: ಭಾರತದ ಪ್ರಧಾನಮಂತ್ರಿಯಾಗಿ ಗುಜರಾತ್ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ನರೇಂದ್ರ ಮೋದಿ ಈ ದಿನ ಪ್ರಮಾಣವಚನ ಸ್ವೀಕರಿಸಿದರು. ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟವನ್ನು ಸೋಲಿಸಿ ಬಿಜೆಪಿ ಅಧಿಕಾರಕ್ಕೆ ಬಂದಿತ್ತು.
2014: ಆಫ್ರಿಕಾದ ದೇಶ ಸಿಯಾರಾ ಲಿಯೋನ್‌ಗೆ ಎಬೋಲಾ ರೋಗವು ಹರಡಿರುವುದನ್ನು ವಿಶ್ವ ಆರೋಗ್ಯ ಸಂಸ್ಥೆಯು ದೃಢಪಡಿಸಿತು.
1945: ಕಾಂಗ್ರೆಸ್ ನಾಯಕ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದಿ. ವಿಲಾಸ್‌ರಾವ್ ದೇಶಮುಖ್ ಜನ್ಮದಿನ.