ಸಿಇಟಿ ಫಲಿತಾಂಶ : ಆಳ್ವಾಸ್ ವಿದ್ಯಾರ್ಥಿಗಳ ಉತ್ತಮ ಸಾಧನೆ
ಮೂಡುಬಿದಿರೆ : 2019ರಲ್ಲಿ ಸಿಇಟಿ ಪರೀಕ್ಷೆಗೆ ಆಳ್ವಾಸ್ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಹಾಜರಾಗಿದ್ದು ಉತ್ತಮ ಸಾಧನೆಯನ್ನು ಮಾಡಿದ್ದಾರೆ. ಆಳ್ವಾಸ್ ದರ್ಶನ್ ಸಮರ್ಥ ಬಿ.ಎಸ್ ಅಗ್ರಿಕಲ್ಚರ್ ನಲ್ಲಿ 10ನೇ ರ್ಯಾಂಕ್ ಪಡೆಯುವುದರ ಮೂಲಕ ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ಒಂದು ಸಾವಿರ ರ್ಯಾಂಕ್ ಒಳಗಡೆ 678 ರ್ಯಾಂಕ್ ಆಳ್ವಾಸ್ ಪಡೆದುಕೊಂಡಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸಿಇಟಿ ಪರೀಕ್ಷೆಯ ಒಂದರಿಂದ ಐವತ್ತು ರ್ಯಾಂಕ್ ಒಳಗಡೆ 20 ರ್ಯಾಂಕ್‍ಗಳನ್ನು ಆಳ್ವಾಸ್‍ನ ವಿದ್ಯಾರ್ಥಿಗಳು ಪಡೆದಿದ್ದು ನೂರರ ಒಳಗಡೆ 51 ರ್ಯಾಂಕ್, 200 ಒಳಗಡೆ 120 ರ್ಯಾಂಕ್, ಮುನ್ನೂರರ ಒಳಗಡೆ 176, ನಾಲ್ಕು ನೂರು ಒಳಗಡೆ 240, ಐನೂರು ಒಳಗಡೆ 301 ಆಳ್ವಾಸ್‍ಗೆ ಲಭಿಸಿದೆ.
ದರ್ಶನ್ ಸಮರ್ಥ ಇಂಜಿನಿಯರಿಂಗ್ 119, ಬಿ.ಎಸ್‍ಸಿ ಅಗ್ರಿಕಲ್ಚರ್ 10ನೇ ರ್ಯಾಂಕ್, ದೀಪಿಕಾ ಎಚ್.ಎಸ್ ಇಂಜಿನಿಯರಿಂಗ್ 127, ಬಿ.ಎಸ್‍ಸಿ ಅಗ್ರಿಕಲ್ಚರ್ 11ನೇ ರ್ಯಾಂಕ್, ಪವನ್ ಶಿವಬಸಪ್ಪ ಅಂಗಡಿ ಇಂಜಿನಿಯರಿಂಗ್ 285, ಬಿ.ಎಸ್‍ಸಿ ಅಗ್ರಿಕಲ್ಚರ್ 34ನೇ ರ್ಯಾಂಕ್, ಅಡಿವಪ್ಪ ಜಬಶೆಟ್ಟಿ ಇಂಜಿನಿಯರಿಂಗ್ 268, ಬಿ.ಎಸ್‍ಸಿ ಅಗ್ರಿಲಕ್ಚರ್ 51ನೇ ರ್ಯಾಂಕ್, ಸೃಷ್ಟಿ ಎಸ್.ಕುಮಾರ್ ಇಂಜಿನಿಯರಿಂಗ್ 318, ಬಿ.ಎಸ್‍ಸಿ ಅಗ್ರಿಕಲ್ಚರ್‍ನಲ್ಲಿ 35ನೇ ರ್ಯಾಂಕ್, ಅಜಯ್ ಡಿ.ಯು ಇಂಜಿನಿಯರಿಂಗ್ 513, ಬಿ.ಎಸ್‍ಸಿ ಅಗ್ರಿಕಲ್ಚರ್ 96, ಪಶುವೈದ್ಯಕೀಯ ವಿಜ್ಞಾನ 168ನೇ ರ್ಯಾಂಕ್, ಹನುಮಂತ ಈರಪ್ಪ ಪೂಜೆರಿ ಇಂಜಿನಿಯರಿಂಗ್ 3509, ಬಿ.ಎಸ್‍ಸಿ ಅಗ್ರಿಕಲ್ಚರ್ 3498, ಬಿ.ಎಸ್ ಅಗ್ರಿಕಲ್ಚರ್ ಪ್ರಾಕ್ಟಿಕಲ್ 45, ಪಶು ವೈದ್ಯಕೀಯ ವಿಜ್ಞಾನ ಪ್ರಾಕ್ಟಿಕಲ್ 116ನೇ ರ್ಯಾಂಕ್ ಗಳಿಸಿದ್ದಾರೆ. ಭುವನಾ ಕೆ.ಎನ್ ಇಂಜಿನಿಯರಿಂಗ್ 579, ಬಿ.ಎಸ್‍ಸಿ ಅಗ್ರಿಕಲ್ಚರ್ 93, ಬಿ.ಎನ್.ವೈ.ಎಸ್ 137, ಪಶುವೈದ್ಯಕೀಯ ವಿಜ್ಞಾನ 206ನೇ ರ್ಯಾಂಕ್, ಸಚಿನ್ ಸಜ್ಜನ್- ಬಿ.ಎಸ್‍ಸಿ ಅಗ್ರಿಕಲ್ಚರ್ ಪ್ರಾಕ್ಟಿಕಲ್‍ನಲ್ಲಿ 55, ಪಶುವೈದ್ಯಕೀಯ ವಿಜ್ಞಾನ ಪ್ರಾಕ್ಟಿಕಲ್ 91ನೇ ರ್ಯಾಂಕ್ ಗಳಿಸಿದ್ದಾರೆ. ಮಹಾವೀರ ನೇಮಿನಾಥ್ ದೊಡ್ಡಮನಿ ಬಿ.ಎಸ್‍ಸಿ ಅಗ್ರಿಕಲ್ಚರ್ ಪ್ರಾಕ್ಟಿಕಲ್ 58, ಪಶುವೈದ್ಯಕೀಯ ವಿಜ್ಞಾನ 100ನೇ ರ್ಯಾಂಕ್, ಶೋಯಬ್ ಅಕ್ತಾರ್ ಇಂಜಿನಿಯರಿಂಗ್ 341, ಬಿ.ಎಸ್‍ಸಿ ಅಗ್ರಿಕಲ್ಚರ್ 42, ಬಿ.ಎನ್.ವೈ.ಎಸ್ 57, ಪಶುವೈದ್ಯಕೀಯ ವಿಜ್ಞಾನ 124ನೇ ರ್ಯಾಂಕ್, ಅನುಷಾ ಎನ್. ಬಿ.ಎಸ್‍ಸಿ ಅಗ್ರಿಕಲ್ಚರ್ ಪ್ರಾಕ್ಟಿಕಲ್ 27, ಪಶುವೈದ್ಯಕೀಯ ವಿಜ್ಞಾನ ಪ್ರಾಕ್ಟಿಕಲ್ 47ನೇ, ಬಾಲಾಜಿ ನಾಯ್ಡು ವಿ. ಇಂಜಿನಿಯರಿಂಗ್ 300, ಬಿ.ಎಸ್‍ಸಿ ಅಗ್ರಿಕಲ್ಚರ್ 50, ಬಿ.ಎನ್.ವೈ.ಎಸ್ 168ನೇ ರ್ಯಾಂಕ್, ಜಾಹ್ನವಿ ಸತೀಶ್ ಶಾನುಬಾಗ್ ಇಂಜಿನಿಯರಿಂಗ್ 353, ಬಿ.ಎಸ್‍ಸಿ ಅಗ್ರಿಕಲ್ಚರ್ 80ನೇ ರ್ಯಾಂಕ್, ಪ್ರಮಥಾ ಗಜಾನನ್ ಭಟ್ ಇಂಜಿನಿಯರಿಂಗ್ 213, ಬಿ.ಎಸ್‍ಸಿ ಅಗ್ರಿಕಲ್ಚರ್ 63 ನೇ ರ್ಯಾಂಕ್, ಆಶ್ರಯ್ ಜೈನ್ ಬಿ.ಎಸ್‍ಸಿ ಅಗ್ರಿಕಲ್ಚರ್ 45, ಬಿ.ಎನ್.ವೈ.ಎಸ್ 26, ಪಶುವೈದ್ಯಕೀಯ ವಿಜ್ಞಾನದಲ್ಲಿ 24ನೇ ರ್ಯಾಂಕ್, ಅರುಣ್ ಮುನ್ನೊಳ್ಳಿ ಬಿ.ಎಸ್‍ಸಿ ಅಗ್ರಿಕಲ್ಚರ್ ಪ್ರಾಕ್ಟಿಕಲ್ 86ನೇ ರ್ಯಾಂಕ್, ಜೀವನ್ ಬಿ.ಜೆ ಬಿ.ಎಸ್‍ಸಿ ಅಗ್ರಿಕಲ್ಚರ್ ಪ್ರಾಕ್ಟಿಕಲ್ 82, ಪಶುವೈದ್ಯಕೀಯ ವಿಜ್ಞಾನ ಪ್ರಾಕ್ಟಿಕಲ್ 192ನೇ ರ್ಯಾಂಕ್, ಶಶಿಧರ್ ಗೌಡ ಕೆ.ಎಂ ಬಿ.ಎಸ್‍ಸಿ ಅಗ್ರಿಕಲ್ಚರ್ ಪ್ರಾಕ್ಟಿಕಲ್ 22, ಪಶುವೈದ್ಯಕೀಯ ವಿಜ್ಞಾನ ಪ್ರಾಕ್ಟಿಕಲ್ 20ನೇ ರ್ಯಾಂಕ್, ಶಿವಕುಮಾರ್ ಬಿ.ಎಸ್‍ಸಿ ಅಗ್ರಿಕಲ್ಚರ್ 246, ಬಿ.ಎಸ್‍ಸಿ ಅಗ್ರಿಕಲ್ಚರ್ ಪ್ರಾಕ್ಟಿಕಲ್ 106, ಪಶುವೈದ್ಯಕೀಯ ವಿಜ್ಞಾನ ಪ್ರಾಕ್ಟಿಕಲ್ 23ನೇ ರ್ಯಾಂಕ್, ಸುಚಿತ್ರಾ ಎ.ಎಸ್ ಪಶುವೈದ್ಯಕೀಯ ವಿಜ್ಞಾನ 311, ಪಶುವೈದ್ಯಕೀಯ ವಿಜ್ಞಾನ ಪ್ರಾಕ್ಟಿಕಲ್ 63ನೇ ರ್ಯಾಂಕ್, ಪಾಶ್ರ್ವನಾಥ್ ಮಳಗೋಡ್ ಅಕ್ಕೊಲೆ ಬಿ.ಎನ್.ವೈ.ಎಸ್ 253, ಪಶುವೈದ್ಯಕೀಯ ವಿಜ್ಞಾನ ಪ್ರಾಕ್ಟಿಕಲ್ 65 , ಆರ್ಥಿಕ್ ಭಂಡಾರಿ ಇಂಜಿನಿಯರಿಂಗ್ 133, ಬಿ.ಫಾರ್ಮ್ ಹಾಗೂ ಡಿ.ಫಾರ್ಮ್‍ನಲ್ಲಿ 511ನೇ ರ್ಯಾಂಕ್, ಅನುಷ್ ಇಂಜಿನಿಯರಿಂಗ್ 186, ಬಿ.ಫಾರ್ಮ್ ಹಾಗೂ ಡಿ.ಫಾರ್ಮ್‍ನಲ್ಲಿ 513ನೇ ರ್ಯಾಂಕ್ ಪಡೆದಿದ್ದಾರೆ ಗಳಿಸಿದ್ದಾರೆ ಎಂದು ಮೋಹನ ಆಳ್ವ ಮಾಹಿತಿ ನೀಡಿದರು.
ಆಳ್ವಾಸ್ ಪಿಯು ಕಾಲೇಜಿನ ಪ್ರಾಂಶುಪಾಲ ಪ್ರೊ.ರಮೇಶ್ ಶೆಟ್ಟಿ, ಸಂಸ್ಥೆಯ ಪಿಆರ್‍ಒ ಡಾ. ಪದ್ಮನಾಭ ಶೆಣೈ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.