varthabharthi


ಈ ದಿನ

ಚಂದ್ರನ ಮೇಲಿಳಿದ ‘ಸರ್ವೇಯರ್ 1’

ವಾರ್ತಾ ಭಾರತಿ : 2 Jun, 2019

1875: ಟೆಲಿಫೋನ್ ಕಂಡುಹಿಡಿದ ಅಮೆರಿಕದ ಖ್ಯಾತ ವಿಜ್ಞಾನಿ ಅಲೆಕ್ಸಾಂಡರ್ ಗ್ರಹಾಂ ಬೆಲ್ ಮೊದಲ ಬಾರಿಗೆ ಟೆಲಿಫೋನ್‌ನಲ್ಲಿ ಧ್ವನಿ ಪ್ರಸರಣ ಮಾಡಿದರು.

1896: ಇಟಲಿಯ ಖ್ಯಾತ ವಿಜ್ಞಾನಿ ಮಾರ್ಕೋನಿ ರೇಡಿಯೊ ಕಂಡುಹಿಡಿದ ತಮ್ಮ ಸಂಶೋಧನೆಗೆ ಪೇಟೆಂಟ್‌ಗೆ ಅರ್ಜಿ ಸಲ್ಲಿಸಿದರು. 1897, ಜು. 2ರಂದು ಅವರಿಗೆ ಹಕ್ಕುಸ್ವಾಮ್ಯ ನೀಡಲಾಯಿತು. ಈ ಸಂಶೋಧನೆಗೆ ಅವರು ನೊಬೆಲ್ ಪ್ರಶಸ್ತಿ ಪಡೆದಿದ್ದಾರೆ.

1946:ಪ್ರಜಾಭಿಮತದಿಂದ ಇಟಲಿಯು ಗಣರಾಜ್ಯವಾಗಿ ಪರಿವರ್ತಿತವಾಯಿತು.

1966: ಚಂದ್ರನ ಮೇಲೆ ಕಾಲಿಟ್ಟ ಮೊದಲ ಪ್ರಥಮ ನಾಸಾ ನೌಕೆ ಎಂದು ಹೆಸರಾದ ‘ಸರ್ವೇಯರ್ 1’ ಇಂದು ಯಶಸ್ವಿಯಾಗಿ ಚಂದ್ರನ ಮೇಲಿಳಿಯಿತು.

1974: ಮಾಲಿ ದೇಶದಿಂದ ಸಂವಿಧಾನ ಅಂಗೀಕಾರ.

1988: ಸಿಐಎಚ್ ಎಂಬ ಕಂಪ್ಯೂಟರ್ ವೈರಸ್‌ನ್ನು ತೈವಾನ್‌ನಲ್ಲಿ ಕಂಡುಹಿಡಿಯಲಾಯಿತು.

2003: ಹೋರಾಟಗಾರ್ತಿ ಆ್ಯಂಗ್‌ಸಾನ್ ಸೂಕಿ ಅವರ ಬಂಧನದ ನಂತರ ಮ್ಯಾನ್ಮಾರ್‌ನಲ್ಲಿ ಆಡಳಿತಾರೂಢ ಸೇನಾಪಡೆ ಅಧಿಕಾರಿಗಳು ದೇಶದ ಎಲ್ಲ ಕಾಲೇಜು, ವಿಶ್ವವಿದ್ಯಾನಿಲಯಗಳನ್ನು ಅನಿರ್ದಿಷ್ಟ ಅವಧಿಗೆ ಮುಚ್ಚಲು ಆದೇಶಿಸಿದರು.

2009: ಸ್ವಿಟ್ಝರ್ಲೆಂಡ್ ಆರ್ಥಿಕ ಹಿಂಜರಿತಕ್ಕೆ ಒಳಗಾಯಿತು.

2015: ಭೂತಾನ್‌ನಲ್ಲಿ 100 ಸ್ವಯಂ ಸೇವಕರು 1 ಗಂಟೆಯ ಅವಧಿಯಲ್ಲಿ 49,672 ಗಿಡಗಳನ್ನು ನೆಡುವುದರ ಮೂಲಕ ಗಿನ್ನೆಸ್ ವಿಶ್ವದಾಖಲೆ ನಿರ್ಮಿಸಿದರು.

2017: ಪ್ಯಾರಿಸ್ ಹವಾಗುಣ ಒಪ್ಪಂದದಿಂದ ಅಮೆರಿಕ ಹಿಂದೆ ಸರಿಯಲಿದೆ ಎಂದು ಆ ದೇಶದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದರು.

1943: ಸಂಗೀತ ಸಂಯೋಜಕ, ಗಾಯಕ, ಗೀತ ರಚನಾಕಾರ ಇಳಯರಾಜ ಜನ್ಮದಿನ.

1956: ಚಿತ್ರ ನಿರ್ದೇಶಕ ತಮಿಳುನಾಡಿನ ಮಣಿರತ್ನಂ ಜನ್ಮದಿನ.

1988: ಬಾಲಿವುಡ್‌ನ ದಂತಕತೆ, ಚಿತ್ರ ನಿರ್ದೇಶಕ ರಾಜ್ ಕಪೂರ್ ನಿಧನ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)