ಗಾಝಾ: ಮೀನುಗಾರಿಕಾ ನಿರ್ಬಂಧವನ್ನು ಸಡಿಲಿಸಿದ ಇಸ್ರೇಲ್
ಜೆರುಸಲೇಮ್, ಜೂ. 4: ದಿಗ್ಬಂಧನಕ್ಕೊಳಗಾಗಿರುವ ಗಾಝಾ ಪಟ್ಟಿಯ ಸಮುದ್ರದಲ್ಲಿ ಫೆಲೆಸ್ತೀನಿಯರು ಮೀನುಗಾರಿಕೆ ನಡೆಸುವ ವ್ಯಾಪ್ತಿಯನ್ನು ಇಸ್ರೇಲ್ ಮಂಗಳವಾರ ಹಿಗ್ಗಿಸಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸ್ಫೋಟಕಗಳಿಂದ ಕೂಡಿದ ಬಲೂನುಗಳನ್ನು ಹಾರಿಸಿರುವುದಕ್ಕೆ ಪ್ರತಿಯಾಗಿ ಇಸ್ರೇಲ್ ಒಂದು ವಾರದ ಹಿಂದೆ ನಿಯಂತ್ರಣಗಳನ್ನು ಹೇರಿತ್ತು.
ಈ ನಿಯಂತ್ರಣವನ್ನು ಈಗ ಸಡಿಲಿಸಲಾಗಿದ್ದು, ಈಗ ಗರಿಷ್ಠ 15 ನಾಟಿಕಲ್ ಮೈಲಿಗಳವರೆಗೆ ಮೀನುಗಾರಿಕೆ ಮಾಡಬಹುದಾಗಿದೆ ಎಂದು ಅಧಿಕಾರಿ ತಿಳಿಸಿದರು.
ಈ 15 ನಾಟಿಕಲ್ ಮೈಲಿಗಳ ಮಿತಿಯನ್ನು ಇಸ್ರೇಲ್‌ನಲ್ಲಿ ಎಪ್ರಿಲ್‌ನಲ್ಲಿ ಚುನಾವಣೆ ನಡೆಯುವ ಮುನ್ನ ವಿಧಿಸಲಾಗಿತ್ತು. ಈ ಮಿತಿಯು ಹಲವು ವರ್ಷಗಳಲ್ಲೇ ಅತ್ಯಂತ ಗರಿಷ್ಠ ಮಿತಿಯಾಗಿದೆ.
ಕಳೆದ ಬುಧವಾರ ಗಾಝಾದಿಂದ ಬೆಂಕಿ ಬಾಂಬ್‌ಗಳನ್ನು ಹೊತ್ತ ಬಲೂನುಗಳು ಇಸ್ರೇಲ್‌ಗೆ ಹಾರಿದ ಬಳಿಕ, ಮೀನುಗಾರಿಕಾ ಮಿತಿಯನ್ನು 10 ನಾಟಿಕಲ್ ಮೈಲಿಗೆ ಇಸ್ರೇಲ್ ಸೀಮಿತಗೊಳಿಸಿತ್ತು.
Next Story