varthabharthi


ಕಲೆ - ಸಾಹಿತ್ಯ

ಕಾರ್ನಾಡ್ ಕಣ್ಮರೆಯಾಗಿಲ್ಲ

ವಾರ್ತಾ ಭಾರತಿ : 10 Jun, 2019
-ಅಕ್ಬರ್ ಅಲಿ, ಕಾವಳಕಟ್ಟೆ

ಕರುನಾಡ ಕಾರ್ನಾಡ್

ಕಣ್ಮರೆಯಾಗಿಲ್ಲ

ಕಾರ್ಮೋಡ ಕವಿದಿದ್ದರೂ

ಬಿತ್ತಿದ ಬೀಜಗಳು

ಜಗದಗಲ ಫಲ ನೀಡಲಿದೆ

ಹೌದು ಇಲ್ಲಿ ಆಕ್ಸಿಜನ್ ಇದ್ದರೂ

ಉಸಿರಾಡುವುದು ಕಷ್ಟ

ಹವಾಮಾನದಲ್ಲಿ ಸೇರಿದ ವಿಷ

ಸಾವನ್ನು ಬಯಸುತ್ತೆ

ವಿಕೃತರಿಗೊಂದು ನೆನಪಿರಲಿ

ಜೀವಪರರ ಸಾವು ಸಾವಲ್ಲ

ಬದುಕಿನ ಆರಂಭ

ಅವರು ತಲೆ ತಲೆಮಾರುಗಳಾಚೆಗೂ

ಅಮರವಾಗಿಬಿಡುತ್ತಾರೆ

ಒಂದಾನೊಂದು ಕಾಲದಲ್ಲಿ

ಶಂಕರನ ವೇಗಕ್ಕೆ ಬೆನ್ನೆಲುಬಾಗಿ

ವಂಶ ವೃಕ್ಷದ ವಿಷ್ಣುವಿಗೆ ಸಾರಥಿಯಾಗಿದ್ದ

ಕಾರ್ನಾಡ್ ಪ್ರಜ್ಞಾವಂತರಿಗೆ

ಸ್ಫೂರ್ತಿಯಾಗಿ ಬದುಕುಳಿಯುತ್ತಾರೆ

ಕಾರ್ನಾಡ್ ಸರ್ ನಮಗೂ ಭರವಸೆಯಿದೆ

ಈ ನೆಲದಲ್ಲಿ ಸೌಹಾರ್ದದ ಬೇರು ತಳವೂರಲಿದೆ

ಆಕಾಶದಲ್ಲಿ ನಿರ್ಭೀತಿಯ ರೆಕ್ಕೆಗಳು ಹಾರಲಿದೆ

ಬೆಳಕು ಕಳೆದುಕೊಂಡ ದಾರಿಯುದ್ದಕ್ಕೂ

ಕನಸಿನ ಕಿರಣಗಳು ಪ್ರಜ್ವಲಿಸಲಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)