ಗಿಜಿಗುಟ್ಟುವ ನಗರಗಳು, ಇನ್ನಷ್ಟು ಜನರು...
ವಿಶ್ವಸಂಸ್ಥೆಯ ವರದಿಯೊಂದು ಭಾರತದ ಭವಿಷ್ಯ ಹೇಗಿರುತ್ತದೆಂದು ಹೇಳುತ್ತಿದೆ!
2060ರಲ್ಲಿ ಭಾರತದ ಜನಸಂಖ್ಯೆ ಗರಿಷ್ಠ ಸಂಖ್ಯೆ ತಲುಪಲಿದೆ. ಈಗ ಭಾರತದ ಜನಸಂಖ್ಯೆಯ ಬಹುದೊಡ್ಡ ಪಾಲು ಯುವಜನತೆಯಾಗಿರುವುದರಿಂದ, ಜನಸಂಖ್ಯೆ ಹೆಚ್ಚುತ್ತಲೇ ಹೋಗುತ್ತದೆ. ಮುಂದಿನ 80 ವರ್ಷಗಳಲ್ಲಿ ಏರಲಿರುವ ಜನಸಂಖ್ಯೆಯ ದರದ ಲೆಕ್ಕಾಚಾರದ ಪ್ರಕಾರ 2060ರಲ್ಲಿ ಭಾರತದ ಜನಸಂಖ್ಯೆ 1.65 ಬಿಲಿಯ ತಲುಪಲಿದ್ದು ಅಂತಿಮವಾಗಿ ಅದು ಇಳಿಮುಖವಾಗಲಿದೆ.
ಹೆಚ್ಚು ಹೆಚ್ಚು ಭಾರತೀಯರು ವಾಸಿಸುವ ನಗರಗಳು, ಸಮತೋಲನವಿಲ್ಲದ ಲಿಂಗ ದಾಮಾಶಯ, 2060ರಲ್ಲಿ 1.65 ಬಿಲಿಯಕ್ಕೆ ಏರಲಿರುವ ಜನಸಂಖ್ಯೆ. ಇತ್ತೀಚೆಗೆ ಬಿಡುಗಡೆಯಾದ ವಿಶ್ವಸಂಸ್ಥೆಯ ವರದಿಯೊಂದರ ಸಾರಾಂಶ ಇದು. 2100ರ ವೇಳೆಗೆ ವಿಶ್ವದ ಜನಸಂಖ್ಯೆ 7.7 ಬಿಲಿಯನ್ನಿಂದ 10.9 ಬಿಲಿಯನ್ಗೆ ಏರುತ್ತದೆಂದೂ ಆ ವರದಿ ಹೇಳಿದೆ.
ತಮ್ಮ ಈ ತೀರ್ಮಾನಗಳಿಗೆ ಬರಲು ವರದಿಯ ಲೇಖಕರು 1950ರಿಂದ 2018ರ ವರೆಗಿನ ಜನಗಣತಿಗಳ ಮತ್ತು ರಾಷ್ಟ್ರೀಯವಾಗಿ ಪ್ರಾತಿನಿಧಿಕವಾದ ಸ್ಯಾಂಪಲ್ ಸಮೀಕ್ಷೆಗಳ ಅಧ್ಯಯನ ನಡೆಸಿದರು.
ವರ್ಲ್ಡ್ ಪಾಪ್ಯುಲೇಶನ್ ಪ್ರಾಸ್ಪೆಕ್ಟ್ಸ್ ಎಂಬ ಆ ವರದಿಯ ಪ್ರಕಾರ 2027ರ ವೇಳೆಗೆ ಭಾರತವು ಚೀನಾದ ಜನಸಂಖ್ಯೆಯನ್ನೂ ಮೀರಿ ವಿಶ್ವದಲ್ಲಿ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗುತ್ತದೆ.
ನಮ್ಮ ದೇಶದಲ್ಲಿ ಈಗ ಮಕ್ಕಳ ಜನನ ಪ್ರಮಾಣದ ದರ ಕಡಿಮೆಯಾಗುತ್ತಿದೆಯಾದರೂ 2027ರ ವೇಳೆಗೆ ಯಾಕೆ ಭಾರತ ವಿಶ್ವದಲ್ಲೇ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗುತ್ತದೆ ಎಂದರೆ, ಈಗಾಗಲೇ ಭಾರತದಲ್ಲಿ ಮಕ್ಕಳ ಮತ್ತು ಯುವಜನತೆಯ ಜನಸಂಖ್ಯೆ ಸಾಕಷ್ಟು ದೊಡ್ಡದಿದೆ. ಮುಂದಿನ ದಶಕಗಳಲ್ಲಿ ಇವರೆಲ್ಲ ಸಂತಾನೋತ್ಪತ್ತಿ ಮಾಡುವ ವಯಸ್ಸಿನವರಾಗಿರುತ್ತಾರೆ. ವರದಿ ಹೇಳುವ ಪ್ರಕಾರ ಭಾರತ ಆಗ ಹಲವು ಗಂಭೀರ ಸ್ವರೂಪದ ಸಮಸ್ಯೆಗಳನ್ನು, ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.
2060ರಲ್ಲಿ ಭಾರತದ ಜನಸಂಖ್ಯೆ ಗರಿಷ್ಠ ಸಂಖ್ಯೆ ತಲುಪಲಿದೆ. ಈಗ ಭಾರತದ ಜನಸಂಖ್ಯೆಯ ಬಹುದೊಡ್ಡ ಪಾಲು ಯುವಜನತೆಯಾಗಿರುವುದರಿಂದ, ಜನಸಂಖ್ಯೆ ಹೆಚ್ಚುತ್ತಲೇ ಹೋಗುತ್ತದೆ. ಮುಂದಿನ 80 ವರ್ಷಗಳಲ್ಲಿ ಏರಲಿರುವ ಜನಸಂಖ್ಯೆಯ ದರದ ಲೆಕ್ಕಾಚಾರದ ಪ್ರಕಾರ 2060ರಲ್ಲಿ ಭಾರತದ ಜನಸಂಖ್ಯೆ 1.65 ಬಿಲಿಯ ತಲುಪಲಿದ್ದು ಅಂತಿಮವಾಗಿ ಅದು ಇಳಿಮುಖವಾಗಲಿದೆ.
ಜನಸಂಖ್ಯೆಯ ಫಲ (ಅಥವಾ ಹೊರೆ) ಹೇಗಿರುತ್ತದೆ?
ಜನಸಂಖ್ಯಾ ಹೆಚ್ಚಳದಿಂದ ದೇಶಕ್ಕೆ ಲಾಭವಾಗುತ್ತದೆ.ಅದೊಂದು ಹೊರೆಯಾಗುವುದಿಲ್ಲವೆಂದು ಹಲವಾರು ವರ್ಷಗಳಿಂದ ಹೇಳುತ್ತಾ ಬರಲಾಗಿದೆ: ಜನಸಂಖ್ಯೆಯ ಬಹುಪಾಲು ನೌಕರಿ/ಕೆಲಸಮಾಡುವ ವಯೋಮಾನದ ಜನರಾಗಿರುವುದರಿಂದ ಉತ್ತಮ ಆರ್ಥಿಕ ಬೆಳವಣಿಗೆಯ ಅವಧಿಯನ್ನು ದೇಶ ಕಾಣಲಿದೆ. ಈ ಲಾಭ/ಡಿವಿಡೆಂಡ್ ಹದಿನೈದರಿಂದ ಅರುವತ್ತನಾಲ್ಕರ ವಯೋಮಾನದ ನಡುವಿನ ಜನರು ಶ್ರಮಿಕ ಶಕ್ತಿಯ ಭಾಗವಾಗುವುದರಿಂದ ದೊರಕುವ ಜನಸಂಖ್ಯಾ ಡಿವಿಡೆಂಡ್ ಎನ್ನಲಾಗಿದೆ. ಆಗ ಆರೋಗ್ಯಸೇವೆ ಹಾಗೂ ಆರ್ಥಿಕ ನೆರವಿನ ಅವಶ್ಯಕತೆಯುಳ್ಳ ಹಿರಿಯ ನಾಗರಿಕರ ಸಂಖ್ಯೆ ಶ್ರಮಿಕ ಶಕ್ತಿಯ ಭಾಗವಾಗಿರುವ ಜನರಿಗಿಂತ ತುಲನಾತ್ಮಕವಾಗಿ ಕಡಿಮೆ ಇರುತ್ತದೆ.
ವರದಿಯ ದತ್ತಾಂಶಗಳ ಪ್ರಕಾರ ಈಗ ಮತ್ತು 2063ರ ನಡುವಣ ಅವಧಿಯಲ್ಲಿ ದುಡಿಯುವ ವಯೋಮಾನದ ಜನರ ಜನಸಂಖ್ಯೆ ಒಟ್ಟು ಜನಸಂಖ್ಯೆಯ ಶೇ. 65ದಷ್ಟು ಆಗಿಯೇ ಮುಂದುವರಿಯುತ್ತದೆ. 2063ರ ಬಳಿಕ ವೃದ್ಧರ, ಹಿರಿಯ ನಾಗರಿಕರ ಸಂಖ್ಯೆಯಲ್ಲಿ ಏರಿಕೆಯಾಗುತ್ತದೆ. ಜನಸಂಖ್ಯಾ ‘ಡಿವಿಡೆಂಡ್’ ಬಹಳ ಮುಖ್ಯವಾದರೂ, ಈ ಜನಸಾಗರಕ್ಕೆ ಸೂಕ್ತ ತರಬೇತಿ ನೀಡಿ ಅವರಿಗೆ ನೌಕರಿ ನೀಡುವ ಪ್ರಕ್ರಿಯೆಗೆ ದೇಶ ಸಿದ್ಧವಾಗಿರಬೇಕಾಗುತ್ತದೆ. ಇದನ್ನು ಮಾಡಲು ಸುಮಾರು ಐದು ದಶಕಗಳ ಕಾಲಾವಕಾಶ ಸಿಗಲಿದೆ. ಆದರೆ ಈ ಜನ ಸಾಗರದ ದುಡಿಯುವ ಅವಧಿ ಮುಗಿಯುವುದರೊಳಗಾಗಿ ದೇಶ ಎಚ್ಚೆತ್ತುಕೊಳ್ಳಬೇಕಾಗುತ್ತದೆ.
ಮಹಿಳೆಯರಿಗಿಂತ ಪುರುಷರ ಸಂಖ್ಯೆ ಹೆಚ್ಚು
ಈಗಿನಿಂದ 2100ರ ವರೆಗೆ ಭಾರತದಲ್ಲಿ ಮಹಿಳೆಯರಿಗಿಂತ ಪುರುಷರ ಸಂಖ್ಯೆಯೇ ಹೆಚ್ಚು ಇರುತ್ತದೆ. ಇದಕ್ಕಿರುವ ಒಂದೇ ಅಪವಾದವೆಂದರೆ 65ರ ವಯಸ್ಸಿನ ನಂತರದ ಜನಸಂಖ್ಯೆ: ಈ ವಯಸ್ಸಿನ ಬಳಿಕ ಪುರುಷರಿಗಿಂತ ಮಹಿಳೆಯರು ಹೆಚ್ಚು ದೀರ್ಘಾವಧಿಯವರೆಗೆ ಬದುಕುವುದೇ ಇದಕ್ಕೆ ಕಾರಣವಾಗಿದೆ. ಮತ್ತು ಈ ರೀತಿಯ ಮಹಿಳೆಯರ ಸಂಖ್ಯಾ ಹೆಚ್ಚಳ ಮುಂದುವರಿಯಲಿದೆ ಎಂದು ವರದಿ ಹೇಳಿದೆ.
ಆತಂಕದ ವಿಷಯವೆಂದರೆ ಆಗ ಪುರುಷರಿಗಿಂತ ಕಡಿಮೆ ಸಂಖ್ಯೆಯಲ್ಲಿ ಮಹಿಳೆಯರು ಜನಿಸಲಿದ್ದಾರೆ. ವರದಿಯಲ್ಲಿರುವ ಲಿಂಗ ದಾಮಾಶಯ ದತ್ತಾಂಶಗಳ ವಿಶ್ಲೇಷಣೆಯ ಪ್ರಕಾರ ಹೀಗೆ ಗಂಡುಗಳಿಗಿಂತ ಕಡಿಮೆ ಸಂಖ್ಯೆಯಲ್ಲಿ ಹೆಣ್ಣು ಶಿಶುಗಳ ಜನನದ ಪ್ರಮಾಣ ಮುಂದುವರಿದು ಭಾರತದ ಲಿಂಗದಾಮಾಶಯದಲ್ಲಿ ಏರುಪೇರಾಗಲಿದೆ. 2011ರ ಜನಗಣತಿಯ ಪ್ರಕಾರ ಲಿಂಗದಾಮಾಶಯವು ಪ್ರತಿ ಒಂದು ಸಾವಿರ ಪುರುಷರಿಗೆ 943 ಮಹಿಳೆಯರು. ವಿಶ್ವಸಂಸ್ಥೆಯ ದತ್ತಾಂಶಗಳು ಇದಕ್ಕಿಂತ ಹೆಚ್ಚು ಆತಂಕಕಾರಿಯಾಗಿವೆ. ಆ ದತ್ತಾಂಶಗಳ ಪ್ರಕಾರ ಸದ್ಯದ ಲಿಂಗದಾಮಾಶಯ ಪ್ರತಿ 1000 ಪುರುಷರಿಗೆ 924 ಆಗಿದೆ. ಲಿಂಗ ದಾಮಾಶಯದಲ್ಲಿ ಸುಧಾರಣೆ ಕಂಡು ಬಂದರೂ ದತ್ತಾಂಶಗಳು ಹೇಳುವಂತೆ 2100ರಲ್ಲಿ ಕೂಡಾ ಗುಣಮಟ್ಟದಲ್ಲಿ ಸುಧಾರಣೆ ಕಾಣಿಸುತ್ತಿಲ್ಲ
ಗ್ರಾಮದಿಂದ ನಗರಗಳ ಕಡೆಗೆ
ಭಾರತ ನಗರಗಳತ್ತ ಚಲಿಸುತ್ತದೆ. ಒಂದು ಕಾಲದಲ್ಲಿ ಭಾರತವು ಹಳ್ಳಿಗಳಲ್ಲಿತ್ತು. ಆದರೆ 2050ರ ವೇಳೆಗಾಗುವಾಗ ದೇಶದ ಜನಸಂಖ್ಯೆಯ ಬಹುಪಾಲು ಮಂದಿ ನಗರಗಳಲ್ಲಿ ವಾಸಿಸುತ್ತಾರೆ. ಈಗಾಗಲೇ ಭಾರೀ ಜನಸಂಖ್ಯೆಯ ಹೊರಲಾರದ ಭಾರ ಹೊತ್ತು ನಲುಗುತ್ತಿರುವ ಭಾರತದ ನಗರಗಳ ಮೇಲೆ ಬೀಳುವ ಹೊರೆ ಇನ್ನಷ್ಟು ಹೆಚ್ಚಾಗುತ್ತಲೇ ಹೋಗುತ್ತದೆ.
ಈ ಗ್ರಾಮೀಣ ಪ್ರದೇಶಗಳಿಂದ ನಗರ ಪ್ರದೇಶಗಳಿಗೆ ವಲಸೆಯ ಜೊತೆಗೆ ಜನಸಂಖ್ಯೆ ಕೂಡಾ ಹೆಚ್ಚುತ್ತಲೇ ಇರುವುದರಿಂದ, ಒಟ್ಟು ವೆಚ್ಚಗಳು ತುಂಬಾ ಏರಿಕೆಯಾಗುತ್ತದೆ. ಅಂತರ್ಜಲ ಮಟ್ಟ ಕುಸಿದು ಬತ್ತಿ ಹೋಗುತ್ತಿರುವ ಮತ್ತು ನಗರಗಳಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯ ಕುರಿತಾದ ವರದಿಗಳನ್ನು ಗಮನಿಸಿದರೆ ಭವಿಷ್ಯದಲ್ಲಿ ಜನರ ಜೀವನ ಎಷ್ಟು ಕಠಿಣವಾಗಬಹುದು, ಎಷ್ಟು ಸಮಸ್ಯಾತ್ಮಕವಾಗಬಹುದು ಎಂಬುದನ್ನು ನಾವು ಊಹಿಸಿಕೊಳ್ಳಬಹುದಾಗಿದೆ.
ಕೃಪೆ: scroll.in