varthabharthi


ಈ ದಿನ

ಡಾರ್ವಿನ್ ವಿಕಾಸವಾದ ಸಿದ್ಧಾಂತದ ಕುರಿತು ಚರ್ಚೆ

ವಾರ್ತಾ ಭಾರತಿ : 29 Jun, 2019

1799: ಕೃಷ್ಣರಾಜ್ ಒಡೆಯರ್ ಅವರನ್ನು ಮೈಸೂರಿನ ರಾಜರೆಂದು ಘೋಷಿಸಲಾಯಿತು.

1860: ಚಾರ್ಲ್ಸ್ ಡಾರ್ವಿನ್‌ರ ವಿಕಾಸ ವಾದ ಸಿದ್ಧಾಂತದ ಕುರಿತು ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯದ ಮ್ಯೂಸಿಯಂನಲ್ಲಿ ಥಾಮಸ್ ಹೆನ್ರಿ ಹಕ್ಸ್‌ಲಿ ಹಾಗೂ ಬಿಷಪ್ ಸ್ಯಾಮ್ಯುಯೆಲ್ ವಿಲ್ಬರ್ಸ್‌ಫೋರ್ಸ್ ಮಧ್ಯೆ ಗಾಢ ಚರ್ಚೆ ನಡೆಯಿತು.

1894: ಕೊರಿಯಾ ದೇಶವು ಚೀನಾದಿಂದ ಸ್ವಾತಂತ್ರ ಘೋಷಿಸಿಕೊಂಡಿತು.

1914: ದಕ್ಷ್ಷಿಣ ಆಫ್ರಿಕಾದಲ್ಲಿ ಭಾರತೀಯರ ಹಕ್ಕುಗಳಿಗಾಗಿ ಹೋರಾಟ ನಡೆಸಿದ ಗಾಂಧೀಜಿಯವರನ್ನು ಬಂಧಿಸಲಾಯಿತು.

1933: ಬೆಲ್ಜಿಯಂನ ಆ್ಯಂಟ್‌ವರ್ಪ್ ನಗರದಲ್ಲಿ ಫ್ಯಾಶಿಸಂ ಹಾಗೂ ಯುದ್ಧವನ್ನು ವಿರೋಧಿಸಿ 50,000 ಜನರು ತಮ್ಮ ಪ್ರತಿಭಟನೆ ದಾಖಲಿಸಿದರು.

1937: ವಿಶ್ವದ ಪ್ರಥಮ ತುರ್ತು ಕರೆ ಟೆಲಿಫೋನ್ ಸೇವೆ ಲಂಡನ್‌ನಲ್ಲಿ ಪ್ರಾರಂಭವಾಯಿತು. ಮೊದಲ ಸಂಖ್ಯೆ 999 ಆಗಿತ್ತು.

1960: ಬೆಲ್ಜಿಯಂ ದೇಶದಿಂದ ಕಾಂಗೊ ದೇಶಕ್ಕೆ ಸ್ವಾತಂತ್ರ್ಯ ಲಭಿಸಿತು.

1965: ‘ರನ್ನ್ ಆಫ್ ಕಚ್’ ಪ್ರದೇಶದಲ್ಲಿ ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ಆಗಾಗ್ಗೆ ನಡೆಯುತ್ತಿದ್ದ ಕದನಕ್ಕೆ ವಿಶ್ವಸಂಸ್ಥೆಯ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಒಪ್ಪಂದ ಏರ್ಪಟ್ಟಿತು. ರನ್ನ್ ಆಫ್ ಕಚ್ ಪ್ರದೇಶದ ಮೇಲಿನ ಹಕ್ಕು ತಮ್ಮದೆಂದು ಎರಡೂ ದೇಶಗಳು ಸುಮಾರು ದಿನಗಳಿಂದ ಕದನಕ್ಕಿಳಿದಿದ್ದವು. ಈ ಕದನದಲ್ಲಿ ಪಾಕಿಸ್ತಾನದ ಸುಮಾರು 3,800 ಸೈನಿಕರು ಮೃತಪಟ್ಟರೆ, ಭಾರತ ತನ್ನ 3,000 ಯೋಧರನ್ನು ಕಳೆದುಕೊಂಡಿತು.

1997: ಹಾಂಗ್ ಕಾಂಗ್ 157 ವರ್ಷಗಳ ಬ್ರಿಟಿಷ್ ಆಳ್ವಿಕೆಯಿಂದ ಮುಕ್ತಿ ಪಡೆಯಿತು.

2015: ಹರ್ಕ್ಯುಲಸ್ ಸಾರಿಗೆ ವಿಮಾನವು ಇಂಡೋನೇಶ್ಯಾ ದ ಮೆಡಾನ್ ಎಂಬಲ್ಲಿ ಪತನಗೊಂಡು 116 ಜನ ಮೃತಪಟ್ಟರು.

1917: ಭಾರತೀಯ ರಾಷ್ಟ್ರೀಯ ಕಾಂಗ್ರೆಸಿನ ಸ್ಥಾಪಕ ಸದಸ್ಯ ಡಾ.ದಾದಾಭಾಯಿ ನವರೋಜಿ ನಿಧನ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)