varthabharthi


ಈ ದಿನ

ಭಾರತದಲ್ಲಿ ಸಿನೆಮಾ ಯುಗಕ್ಕೆ ನಾಂದಿಯಾದ ಲೂಮಿಯರ್ ಸಹೋದರರ ಪ್ರದರ್ಶನ

ವಾರ್ತಾ ಭಾರತಿ : 7 Jul, 2019

1763: ಬ್ರಿಟಿಷರು ಮೀರ್ ಜಾಫರ್‌ನನ್ನು ಬಂಗಾಳದ ನವಾಬನನ್ನಾಗಿ ಘೋಷಿಸಿದರು.

1896: ಫ್ರೆಂಚ್‌ನ ಸಿನೆಮಾ ಛಾಯಾಗ್ರಾಹಕ ರಾದ ಲೂಮಿಯರ್ ಸಹೋದರರು ಈ ದಿನ ಮುಂಬೈನ ವ್ಯಾಟ್ಸನ್ ಹೊಟೇಲ್‌ನಲ್ಲಿ ಆರು ಸಿನೆಮಾಗಳ ಪ್ರದರ್ಶನವನ್ನು ಏರ್ಪಡಿಸಿದರು. ಇದು ಭಾರತದಲ್ಲಿ ಸಿನೆಮಾ ಯುಗಕ್ಕೆ ನಾಂದಿಯಾಯಿತು. ಪ್ಯಾರಿಸ್‌ನಲ್ಲಿ ಸಿನೆಮಾಗಳನ್ನು ಪ್ರದರ್ಶಿಸಿ ಯಶಸ್ಸು ಕಂಡಿದ್ದ ಅವರು ಮುಂಬೈನ ವ್ಯಾಟ್ಸನ್ ಹೊಟೇಲ್‌ನಲ್ಲಿ 1 ರೂ. ಟಿಕೆಟ್ ದರಕ್ಕೆ ಸಿನೆಮಾ ಪ್ರದರ್ಶಿಸಿದರು. ‘ದ ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆ ಈ ಘಟನೆಯನ್ನು ‘ಶತಮಾನದ ಪವಾಡ’ ಎಂದು ಬಣ್ಣಿಸಿತು.

1943: ರಾಷ್ ಬಿಹಾರಿ ಬೋಸ್ ಸಿಂಗಾಪುರದಲ್ಲಿ ತಮ್ಮ ಭಾರತೀಯ ರಾಷ್ಟ್ರೀಯ ಸೇನೆ (ಐಎನ್‌ಎ)ಯ ಮುಖಂಡತ್ವವನ್ನು ಇನ್ನೊಬ್ಬ ಕ್ರಾಂತಿಕಾರಿ ಸಂಗಾತಿ ಸುಭಾಶ್ಚಂದ್ರ ಬೋಸ್ ಅವರಿಗೆ ವಹಿಸಿಕೊಟ್ಟರು.

1946: ಮುಂಬೈನಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸಭೆಯನ್ನುದ್ದೇಶಿಸಿ ಮಹಾತ್ಮಾ ಗಾಂಧೀಜಿ ಮಾತನಾಡಿದರು.

1948: ದಾಮೋದರ ಕಣಿವೆ ನಿಗಮ ಸ್ಥಾಪನೆಯಾಗುವುದರೊಂದಿಗೆ ಭಾರತದಲ್ಲಿ ಪ್ರಥಮ ಸಾರ್ವಜನಿಕ ನಿಗಮ ಸ್ಥಾಪನೆಯಾಯಿತು.

1953: ಅರ್ಜೆಂಟೀನಾದ ಕ್ರಾಂತಿಕಾರಿ ಅರ್ನೆಸ್ಟೋ ಚೆಗುವೆರಾ, ಬೊಲಿವಿಯಾ, ಪೆರು, ಈಕ್ವೆಡಾರ್, ಪನಾಮ, ಕೋಸ್ಟರಿಕಾ ಮತ್ತಿತರ ದೇಶಗಳ ಪ್ರಯಾಣವನ್ನು ಆರಂಭಿಸಿದರು. ಈ ಕುರಿತು ಅವರು ‘ಮೋಟಾರ್ ಸೈಕಲ್ ಡೈರಿ’ ಎಂಬ ಗ್ರಂಥವನ್ನು ಬರೆದಿದ್ದಾರೆ.

1978: ಸಾಲೊಮನ್ ದ್ವೀಪಗಳು ಯುನೈಟೆಡ್ ಕಿಂಗ್‌ಡಮ್‌ನಿಂದ ಸ್ವಾತಂತ್ರ್ಯ ಪಡೆಯಿತು.

1980: ಇರಾನ್‌ನಲ್ಲಿ ಶರಿಯ ಕಾನೂನು ಜಾರಿಯಾಯಿತು.

2017: ಹಿಂಸಾತ್ಮಕ ಪ್ರತಿಭಟನೆಗಳ ಮಧ್ಯೆಯೂ ಜರ್ಮನಿಯ ಹ್ಯಾಂಬರ್ಗ್‌ನಲ್ಲಿ ವಿಶ್ವನಾಯಕರ ಜಿ-20 ಸಮ್ಮೇಳನ ಆರಂಭವಾಯಿತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)