ಪತ್ರಿಕೆಗಳಿನ್ನು ಪುಕ್ಕಟೆಯಾಗಿ ಬಿಕರಿಯಾಗಲಿವೆ. ಸುದ್ದಿ ಕೇಳಿ ಓದುಗ ರೋಮಾಂಚನಗೊಂಡ. ಮೈತುಂಬಾ ಜಾಹೀರಾತುಗಳ ಹೊತ್ತ 50 ಪುಟಗಳ ಪತ್ರಿಕೆ ಮನೆಯಂಗಳಕ್ಕೆ ಬಂದು ಬಿತ್ತು. ಮುಖಪುಟದಲ್ಲಿ ‘ತೈಲ ಬೆಲೆಯೇರಿಕೆ, ದೇಶಾದ್ಯಂತ ಸಂಭ್ರಮಾಚರಣೆ’ ತಲೆಬರಹ. ಕೆಳಗೆ ಬೃಹತ್ ತೈಲ ಕಂಪೆನಿಯ ಜಾಹೀರಾತು ಕಂಗೊಳಿಸುತ್ತಿತ್ತು.