ಬೆಳಕು
ನಡು ರಾತ್ರಿ, ಮಗಳು ದೀಪ ಹಚ್ಚಿ ಪರೀಕ್ಷೆಗೆಂದು ಓದುತ್ತಿದ್ದಳು.
ಎಣ್ಣೆ ಬತ್ತಿ ಚಿಮಿಣಿ ದೀಪ ಆರಿ ಹೋಯಿತು.
ಮತ್ತೆ ಬುಡ್ಡಿಗೆ ಸುರಿಯಲು ಎಣ್ಣೆಯೇ ಇಲ್ಲ ಮನೆಯಲ್ಲಿ.
ಮಗಳು ಹೇಳಿದಳು ‘‘ಅಮ್ಮ ಹೊರಗೆ ಚಂದಿರನ ಬೆಳಕಲ್ಲಿ ಓದುವೆ’’
ಅದ ಕೇಳಿ ಆಕಾಶದ ಮೋಡಗಳೆಲ್ಲ ಬದಿಗೆ ಸರಿದವು. ಚಂದ್ರ ಪ್ರಕಾಶಮಾನವಾಗಿ ಬೆಳಗತೊಡಗಿದ.
ಹೊರ ಬಂದ ಮಗಳು ತಾಯಿಗೆ ಕೂಗಿ ಹೇಳಿದಳು ‘‘ಅಮ್ಮ, ಆಕಾಶದಲ್ಲಿರುವುದು ಚಂದಿರನಲ್ಲ, ಸೂರ್ಯ’’
Next Story