ಮಳೆ...ಮಳೆ...ಮಳೆ.... ನಗರದ ಜನರು ಛತ್ರಿಯಂಗಡಿಯ ಮುಂದೆ ನೆರೆದರು. ಹಳ್ಳಿಯ ರೈತರು ಬೀಜ, ಗೊಬ್ಬರದ ಅಂಗಡಿ ಮುಂದೆ ನೆರೆದರು. ನಗರ ಮಳೆಗೆ ‘ಛೆ ಛೆ’ ಎನ್ನುತ್ತಿತ್ತು. ಹಳ್ಳಿ ಮಳೆಗೆ ಸಂಭ್ರಮಿಸುತ್ತಿತ್ತು.