ಆ ಊರಿಗೆ ಸಹಸ್ರಾರು ಸಂಖ್ಯೆಯಲ್ಲಿ ಸೇನೆಯನ್ನು ತಂದಿರಿಸಲಾಯಿತು. ‘‘ಯಾಕೆ, ಊರಲ್ಲಿ ಗಲಭೆಯಿದೆಯೆ?’’ ಕೇಳಿದರು. ‘‘ಗಲಭೆಯಾಗುವ ಸಾಧ್ಯತೆಯಿದೆ...ಅದನ್ನು ನಿಯಂತ್ರಿಸಲು’’ ‘‘ಕಾರಣ....’’ ‘‘ಸೇನೆ ಬಂದಿರುವುದನ್ನು ವಿರೋಧಿಸಿ ಗಲಭೆ ನಡೆಯುವ ಸಾಧ್ಯತೆಗಳಿವೆ...ಅದಕ್ಕೆ....’’