ಆ.18ಕ್ಕೆ ‘ಲಂಕೇಶ್ ಮೋಹಕ ರೂಪಕಗಳ ನಡುವೆ’ ಕೃತಿ ಬಿಡುಗಡೆ
ಬೆಂಗಳೂರು, ಆ.15: ಪಲ್ಲವ ಪ್ರಕಾಶನ ಮತ್ತು ಕನ್ನಡ ಜನಶಕ್ತಿ ಕೇಂದ್ರ ವತಿಯಿಂದ ಆ.18ರಂದು ರವಿವಾರ ಬೆಳಗ್ಗೆ 10.30ಕ್ಕೆ ನಗರದ ಡಾ.ಎಚ್.ಎನ್.ಸಭಾಂಗಣದಲ್ಲಿ ಹಿರಿಯ ಲೇಖಕ ಶೂದ್ರ ಶ್ರೀನಿವಾಸ್ರವರ ‘ಲಂಕೇಶ್ ಮೋಹಕ ರೂಪಕಗಳ ನಡುವೆ’ ಕೃತಿ ಬಿಡುಗಡೆ ಆಗಲಿದೆ.
ವಿಶ್ರಾಂತ ನ್ಯಾ.ಎ.ಜೆ.ಸದಾಶಿವ ಕೃತಿಯನ್ನು ಬಿಡುಗಡೆ ಮಾಡಲಿದ್ದಾರೆ. ಹಿರಿಯ ವಿಮರ್ಶಕ ಪ್ರೊ.ಸಿರಾಜ್ ಅಹ್ಮದ್ ಕೃತಿಯ ಕುರಿತು ಮಾತನಾಡಲಿದ್ದಾರೆ. ಈ ವೇಳೆ ಮಾಜಿ ಶಿಕ್ಷಣ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್, ಪ್ರಗತಿಪರ ರೈತ ವಡ್ಡಗೆರೆ ಚಿನ್ನಸ್ವಾಮಿ ಹಾಗೂ ಕೃತಿಯ ಲೇಖಕ ಶೂದ್ರ ಶ್ರೀನಿವಾಸ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಕವಿ ಡಾ.ಸಿದ್ದಲಿಂಗಯ್ಯ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಕವಿಗಳಾದ ಪ್ರೊ.ಎಲ್.ಎನ್.ಮುಕುಂದರಾಜ್, ಪದ್ಮಿನಿ ನಾಗರಾಜ್, ಜಯಶಂಕರ ಹಲಗೂರು ಲಂಕೇಶ್ರವರ ಕವಿತೆಗಳನ್ನು ವಾಚನ ಮಾಡಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
Next Story