varthabharthi


ಈ ದಿನ

ಇಂಡಿಯನ್ ಸ್ಟಾಂಡರ್ಡ್ ಟೈಮ್ ಆರಂಭ

ವಾರ್ತಾ ಭಾರತಿ : 1 Sep, 2019

1804: ಜುನೊ ಎಂಬ ಕ್ಷುದ್ರಗ್ರಹವನ್ನು ಜರ್ಮನಿಯ ಖಗೋಳಶಾಸ್ತ್ರಜ್ಞ ಕಾರ್ಲ್ ಲುಡ್ವಿಗ್ ಹಾರ್ಡಿಂಗ್ ಕಂಡುಹಿಡಿದನು.

1858: ಈಸ್ಟ್ ಇಂಡಿಯಾ ಕಂಪೆನಿಯ ನಿರ್ದೇಶಕರ ನ್ಯಾಯಾಲಯ ಲಂಡನ್‌ನ ಈಸ್ಟ್ ಇಂಡಿಯಾ ಹೌಸ್‌ನಲ್ಲಿ ತನ್ನ ಕೊನೆಯ ಸಭೆಯನ್ನು ನಡೆಸಿತು.
1916: 2ನೇ ಜಾಗತಿಕ ಮಹಾಯುದ್ಧದಲ್ಲಿ ಬಲ್ಗೇರಿಯಾ ರೊಮಾನಿಯಾದ ಮೇಲೆ ಯುದ್ಧ ಘೋಷಿಸಿತು.

1942: ಕ್ರಾಂತಿಕಾರಿ ರಾಶ್ ಬಿಹಾರಿ ಬೋಸ್ ಅವರಿಂದ ಭಾರತೀಯ ರಾಷ್ಟ್ರೀಯ ಸೇನೆ(ಐಎನ್‌ಎ) ಸ್ಥಾಪಿಸಲ್ಪಟ್ಟಿತು.

1947: ಭಾರತದಾದ್ಯಂತ ಯುಟಿಸಿ+5:30 ಸಮಯ ಹೊಂದಿಸಿ ಇಂಡಿಯನ್ ಸ್ಟಾಂಡರ್ಡ್ ಟೈಮ್(ಐಎಸ್‌ಟಿ)ನ್ನು ಅಧಿಕೃತವಾಗಿ ಆರಂಭಿಸಲಾಯಿತು. ಯುಟಿಸಿ+5:30 ಎಂದರೆ ಇದು ವಿಶ್ವದ ಗ್ರೀನ್‌ವಿಚ್ ಮೀನ್ ಟೈಮ್(ಜಿಎಮ್‌ಟಿ)ಗಿಂತ ಭಾರತದ ಸಮಯ 5 ಗಂಟೆ 30 ನಿಮಿಷ ಮುಂದಿದೆ ಎಂದು ಅರ್ಥ. ಭಾರತೀಯ ಕಾಲಮಾನವನ್ನು ಅಲಹಾಬಾದ್ ಸಮೀಪವಿರುವ ಮಿರ್ಝಾಪುರದಲ್ಲಿನ ಗಡಿಯಾರ ಗೋಪುರದಲ್ಲಿ ಗುರುತಿಸಲಾಗಿರುವ 82.5 ಡಿಗ್ರಿ ಪೂರ್ವ ರೇಖಾಂಶದ ಆಧಾರದ ಮೇಲೆ ದಾಖಲಿಸಲಾಗಿದೆ.

1956: ಪಾಕಿಸ್ತಾನ ಸೇನಾಪಡೆ ಕಾಶ್ಮೀರದಲ್ಲಿ ಕದನವಿರಾಮ ರೇಖೆಯನ್ನು ಉಲ್ಲಂಘಿಸಿತು.

2015: ಕೊಲಂಬೊದಲ್ಲಿ ಶ್ರೀಲಂಕಾದ ವಿರುದ್ಧ ನಡೆದ ಮೂರನೇ ಟೆಸ್ಟ್‌ನಲ್ಲಿ ಜಯ ಸಾಧಿಸುವ ಮೂಲಕ ಭಾರತ ಕ್ರಿಕೆಟ್ ತಂಡ 1993ರ ನಂತರ ಪ್ರಥಮ ಬಾರಿಗೆ ಶ್ರೀಲಂಕಾದಲ್ಲಿ ಟೆಸ್ಟ್ ಸರಣಿ ಜಯಿಸಿದ ಸಾಧನೆ ಮಾಡಿತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)