varthabharthi


ಈ ದಿನ

ಭಾರತದ ಭೂ ಪ್ರದೇಶಗಳ ಮೇಲೆ ಚೀನಾ ದಾಳಿ

ವಾರ್ತಾ ಭಾರತಿ : 7 Sep, 2019

1504: ವಿಶ್ವ ಪ್ರಖ್ಯಾತ ಚಿತ್ರ ಕಲಾವಿದ ಮೈಕೆಲೆಂಜಲೋನ ಪ್ರಸಿದ್ಧ ಕೃತಿ ‘ಡೇವಿಡ್’ ಫ್ಲಾರೆನ್ಸ್ ನಲ್ಲಿ ಅನಾವರಣಗೊಂಡಿತು.

1522: ಪ್ರಥಮ ಬಾರಿ ವಿಶ್ವವನ್ನು ನೌಕೆಯ ಮೂಲಕ ಪರ್ಯಟನೆ ಮಾಡಿದ್ದ ಸ್ಪಾನಿಶ್ ನಾವಿಕ ಜುವಾನ್ ಡಿ ಎಲ್ಕಾನೋ ಸ್ಪೇನ್‌ಗೆ ಹಿಂದಿರುಗಿದ.

1943: ಎರಡನೇ ಜಾಗತಿಕ ಮಹಾಯುದ್ಧದಲ್ಲಿ ಮಿತ್ರರಾಷ್ಟ್ರಗಳಿಗೆ ಇಟಲಿ ಶರಣಾಯಿತು.

1952: ಜಿನೇವಾದಲ್ಲಿ ಹಕ್ಕುಸ್ವಾಮ್ಯಗಳ ಕುರಿತಾದ ಪ್ರಥಮ ವಿಶ್ವ ಸಮ್ಮೇಳನಕ್ಕೆ ಭಾರತ ಒಳಗೊಂಡಂತೆ 35 ರಾಷ್ಟ್ರಗಳು ಸಹಿ ಹಾಕಿದವು.

1962: ಚೀನಾ ಸೈನ್ಯವು ಭಾರತದ ಪೂರ್ವವಲಯದ ಭೂಪ್ರದೇಶಗಳ ಮೇಲೆ ಮೊದಲ ದಾಳಿ ನಡೆಸಿತು. ಚೀನಾದ ಪ್ರಬಲ ಸೈನ್ಯದ ತುಕಡಿ ‘ಪೀಪಲ್ ಲಿಬರೇಷನ್ ಆರ್ಮಿ’ಯ 60 ಸೈನಿಕರನ್ನು ಒಳಗೊಂಡ ತಂಡ ಭಾರತದ ಕೆಲವು ಭೂಭಾಗಗಳನ್ನು ವಶಪಡಿಸಿಕೊಂಡಿತು. ಉಭಯ ಸೈನ್ಯಗಳ ನಡುವೆ ಆರಂಭದಲ್ಲಿ ಯಾವುದೇ ಗುಂಡಿನ ದಾಳಿ ನಡೆದಿರಲಿಲ್ಲ. ಆದರೆ ಅಂದಿನ ಪ್ರಧಾನಿ ನೆಹರೂ, ಭಾರತದ ಭೂಪ್ರದೇಶಗಳನ್ನು ಮರುವಶಪಡಿಸಿಕೊಳ್ಳಲು ಸೈನ್ಯಕ್ಕೆ ಆದೇಶಿಸಿದರು. ಇದು ಅಂತಿಮವಾಗಿ ಅ.20, 1962ರಂದು ಭಾರತ ಮತ್ತು ಚೀನಾ ಮಧ್ಯದ ಪ್ರಥಮ ಅಧಿಕೃತ ಯುದ್ಧಕ್ಕೆ ಕಾರಣವಾಯಿತು.

1965: ಲೂಸಿಯಾನಾ ಮತ್ತು ಫ್ಲೋರಿಡಾದಲ್ಲಿ ಬೀಸಿದ ಪ್ರಬಲ ಚಂಡಮಾರುತಕ್ಕೆ 75 ಜನರು ಬಲಿಯಾದರು.

2004: ಪ್ಯಾರಾಚೂಟ್ ಸರಿಯಾದ ಸಮಯದಲ್ಲಿ ತೆರೆಯದ ಕಾರಣ ನಾಸಾದ ಮಾನವರಹಿತ ಬಾಹ್ಯಾಕಾಶ ನೌಕೆ ಜೆನೆಸಿಸ್ ನೆಲಕ್ಕಪ್ಪಳಿಸಿತು.

1926: ನಿರ್ದೇಶಕ, ಗಾಯಕ, ಗೀತ ರಚನೆಕಾರ, ಕವಿ ಭೂಪೇನ್ ಹಝಾರಿಕಾ ಜನ್ಮದಿನ.

1933: ಸುಪ್ರಸಿದ್ಧ ಗಾಯಕಿ ಆಶಾ ಭೋಸ್ಲೆ ಮಹಾರಾಷ್ಟ್ರದ ಸತಾರಾದಲ್ಲಿ ಜನಿಸಿದರು.

1960: ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಪತಿ ಫಿರೋಝ್ ಗಾಂಧಿ ನಿಧನ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)