ಉತ್ತರ ಕೊರಿಯದಿಂದ ‘ಅತಿ ದೊಡ್ಡ ರಾಕೆಟ್ ಉಡಾವಕ’ದ ಪರೀಕ್ಷೆ
ಸಿಯೋಲ್ (ದಕ್ಷಿಣ ಕೊರಿಯ), ಸೆ. 11: ಉತ್ತರ ಕೊರಿಯದ ನಾಯಕ ಕಿಮ್ ಜಾಂಗ್ ಉನ್ ಉಪಸ್ಥಿತಿಯಲ್ಲಿ, ಹೊಸ ‘ಅತಿ ದೊಡ್ಡ ಬಹು ರಾಕೆಟ್ ಉಡಾವಕ’ ವ್ಯವಸ್ಥೆಯ ಪ್ರಾಯೋಗಿಕ ಪರೀಕ್ಷೆ ನಡೆದಿದೆ ಎಂದು ಉತ್ತರ ಕೊರಿಯದ ಸರಕಾರಿ ಮಾಧ್ಯಮ ಬುಧವಾರ ವರದಿ ಮಾಡಿದೆ.
ದಕ್ಷಿಣ ಪ್ಯಾಂಗಾಂಗ್ ರಾಜ್ಯದ ಕೇಚೊನ್ ಪ್ರದೇಶದಲ್ಲಿ ಉತ್ತರ ಕೊರಿಯವು ‘ಅಜ್ಞಾತ ಕ್ಷಿಪಣಿಗಳನ್ನು’ ಉಡಾಯಿಸಿದೆ ಎಂದು ದಕ್ಷಿಣ ಕೊರಿಯದ ಸೇನೆ ಮಂಗಳವಾರ ಹೇಳಿದೆ. ಆ ಕ್ಷಿಪಣಿಗಳು ಸುಮಾರು 330 ಕಿಲೋಮೀಟರ್ ಹಾರಿವೆ ಎಂದು ಅದು ತಿಳಿಸಿದೆ.
ಅಮೆರಿಕದೊಂದಿಗೆ ಈ ತಿಂಗಳ ಕೊನೆಯಲ್ಲಿ ಪರಮಾಣು ನಿಶ್ಶಸ್ತ್ರೀಕರಣದ ಬಗ್ಗೆ ಅಧಿಕಾರಿಗಳ ಮಟ್ಟದ ಮಾತುಕತೆ ಸಿದ್ಧ ಎಂದು ಉತ್ತರ ಕೊರಿಯ ಹೇಳಿದ ಸ್ವಲ್ಪವೇ ಹೊತ್ತಿನ ಬಳಿಕ ಈ ಪ್ರಾಯೋಗಿಕ ಪರೀಕ್ಷೆ ನಡೆದಿದೆ.
ಮಂಗಳವಾರದ ಪ್ರಾಯೋಗಿಕ ಪರೀಕ್ಷೆಗೆ ಕಿಮ್ ಜಾಂಗ್ ಉನ್ ‘ಸ್ಥಳದಲ್ಲಿದ್ದು ಮಾರ್ಗದರ್ಶನ ನೀಡಿದರು’ ಎಂದು ಕೊರಿಯನ್ ಸೆಂಟ್ರಲ್ ನ್ಯೂಸ್ ಏಜನ್ಸಿ ವರದಿ ಮಾಡಿದೆ.
Next Story