ಆನ್ಲೈನ್ ವೇಶ್ಯಾವಾಟಿಕೆ ದಂಧೆ: ಏಳು ಮಂದಿಯ ಬಂಧನ
ಬೆಂಗಳೂರು, ಸೆ.12: ಅಕ್ರಮ ಹಣ ಸಂಪಾದನೆಗಾಗಿ ಆನ್ಲೈನ್ ಮೂಲಕ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದಡಿ ಮಾಲಕ ಸೇರಿ ಏಳು ಮಂದಿಯನ್ನು ಬಂಧಿಸುವಲ್ಲಿ ಕಗ್ಗಲಿಪುರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರದ ಬನಶಂಕರಿಯ ಸುಭಾಷ್, ನಾಗರಬಾವಿಯ ನರಸಿಂಹಮೂರ್ತಿ ಸೇರಿದಂತೆ 7 ಮಂದಿಯನ್ನು ಬಂಧಿಸಿ, ಆರೋಪಿಗಳ ದಂಧೆಗೆ ಮನೆ ಬಾಡಿಗೆ ನೀಡಿದ ಮಾಲಕ ರಾಮನಗರದ ಚಿನ್ನಪ್ಪ ಎಂಬಾತನ ವಿರುದ್ಧವೂ ಮೊಕದ್ದಮೆ ದಾಖಲು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story