ಭಾರತದೊಂದಿಗೆ ಸಾಂಪ್ರದಾಯಿಕ ಯುದ್ಧದಲ್ಲಿ ಪಾಕಿಸ್ತಾನ ಸೋಲಬಹುದು: ಇಮ್ರಾನ್ ಖಾನ್
ಇಸ್ಲಾಮಾಬಾದ್ , ಸೆ.15: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ಬಳಿಕ ಭಾರತದ ವಾಗ್ದಾಳಿ ಮುಂದುವರಿಸಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭಾರತದ ವಿರುದ್ಧ ಪರಮಾಣು ಯುದ್ಧ ಸಾಧ್ಯತೆಯಿದೆ ಎಂದು ಪಾಕಿಸ್ತಾನ ಎಂದು ಹೇಳಿದ್ದಾರೆ.
ಖಾಸಗಿ ಟಿವಿ ಚಾನಲ್ ಅಲ್ ಜಜೀರಾಕ್ಕೆ ನೀಡಿರುವ ಸಂದರ್ಶನದಲ್ಲಿ, ತಿಳಿಸಿರುವ ಇಮ್ರಾನ್ ಖಾನ್ ಪಾಕಿಸ್ತಾನವು ಭಾರತದೊಂದಿಗಿನ ಸಾಂಪ್ರದಾಯಿಕ ಯುದ್ಧದಲ್ಲಿ ಸೋಲಬಹುದು, ಮತ್ತು ನಂತರ "ಪರಿಣಾಮಗಳು ಉಂಟಾಗಬಹುದು" ಎಂದು ಎಂದು ಕಳವಳ ವ್ಯಕ್ತಪಡಿಸಿದರು.
ಇಸ್ಲಾಮಾಬಾದ್ ಎಂದಿಗೂ ಪರಮಾಣು ಯುದ್ಧವನ್ನು ಪ್ರಾರಂಭಿಸುವುದಿಲ್ಲ ಮತ್ತು ತಾನು "ಯುದ್ಧ ವಿರೋಧಿ" ಎಂದರು. "ಆದರೆ ಎರಡು ಪರಮಾಣು ಸಶಸ್ತ್ರ ದೇಶಗಳು ಕೈಗೊಂಡ ಸಾಂಪ್ರದಾಯಿಕ ಯುದ್ಧ ಪರಮಾಣು ಯುದ್ಧದಲ್ಲಿ ಕೊನೆಗೊಳ್ಳುವ ಎಲ್ಲ ಸಾಧ್ಯತೆಗಳಿವೆ ಎಂದು ನನಗೆ ಸ್ಪಷ್ಟವಾಗಿದೆ.
ಸಾಂಪ್ರದಾಯಿಕ ಯುದ್ಧದಲ್ಲಿ ನಾವು ಸೋತಿದ್ದೇವೆ, ಪಾಕಿಸ್ತಾನ ಸ್ವಾತಂತ್ರ್ಯಕ್ಕಾಗಿ ಕೊನೆಯ ತನಕ ಹೋರಾಡುತ್ತದೆ ಎಂದು ಇಮ್ರಾನ್ ಖಾನ್ ಹೇಳಿದರು.
Next Story