varthabharthi


ಈ ದಿನ

ಗುಲಾಮರನ್ನು ಸ್ವತಂತ್ರಗೊಳಿಸುವುದಾಗಿ ಅಬ್ರಹಾಂ ಲಿಂಕನ್ ಘೋಷಣೆ

ವಾರ್ತಾ ಭಾರತಿ : 21 Sep, 2019

1772: ಪೋಲ್ಯಾಂಡ್ ದೇಶದ ಪ್ರಥಮ ವಿಭಜನೆಯನ್ನು ಆಸ್ಟ್ರಿಯಾ ಮತ್ತು ರಶ್ಯ ಅನುಮೋದಿಸಿದವು.

1862: ಅಮೆರಿಕ ಅಧ್ಯಕ್ಷ ಅಬ್ರಹಾಂ ಲಿಂಕನ್, ಅಮೆರಿಕದ ಎಲ್ಲ ರಾಜ್ಯಗಳ ಗುಲಾಮರನ್ನು ಸ್ವತಂತ್ರಗೊಳಿಸುವುದಾಗಿ ಘೋಷಿಸಿದರು.

1877: ಜರ್ಮನ್ ಮಾನವಶಾಸ್ತ್ರಜ್ಞ ರುಡಾಲ್ಫ್ ವಿರ್ಕೋವ್ ಪ್ರಾಕೃತಿಕ ಶಾಸ್ತ್ರಜ್ಞರ ಮತ್ತು ಭೌತಶಾಸ್ತ್ರಜ್ಞರ ಸಭೆ ನಡೆಸಿ ಡಾರ್ವಿನ್ನನ ವಿಕಾಸವಾದ ಸಿದ್ಧಾಂತದ ವಿರುದ್ಧ ಶಾಲೆಗಳಲ್ಲಿ ಬೋಧಿಸುವಂತೆ ಕರೆ ನೀಡಿದನು.

1913: ನ್ಯೂ ಮೆಕ್ಸಿಕೊದ ಡಾವ್ಸನ್ ಎಂಬಲ್ಲಿ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ ಸಂಭವಿಸಿ 263 ಜನರು ಅಸುನೀಗಿದ ಘಟನೆ ವರದಿಯಾಗಿದೆ.

1955: ಕೆರಿಬಿಯನ್ ದ್ವೀಪಪ್ರದೇಶದಲ್ಲಿ ಜನೆಟ್ ಹೆಸರಿನ ಚಂಡಮಾರುತಕ್ಕೆ 500 ಜನರು ಬಲಿಯಾದರು.

1965: ಭಾರತ ಮತ್ತು ಪಾಕಿಸ್ತಾನದ ಮಧ್ಯೆ 17 ದಿನಗಳ ಕಾಲ ನಡೆದ ಯುದ್ಧಕ್ಕೆ ವಿರಾಮ ಘೋಷಿಸಲಾಯಿತು. ಪಾಕಿಸ್ತಾನವು ‘ಆಪರೇಷನ್ ಗಿಬ್ರಾಲ್ಟರ್’ ಹೆಸರಲ್ಲಿ ತನ್ನ ಸೈನಿಕರನ್ನು ಕಾಶ್ಮೀರದ ಗಡಿಯೊಳಗೆ ನುಸುಳಲು ಬಿಟ್ಟಿತ್ತು. ಇದನ್ನು ಮನಗಂಡ ಭಾರತದ ಅಂದಿನ ಪ್ರಧಾನಿ ಲಾಲ್‌ಬಹಾದ್ದೂರ್ ಶಾಸ್ತ್ರಿ ಪೂರ್ಣ ಪ್ರಮಾಣದ ಸೇನಾದಾಳಿಗೆ ಆದೇಶವಿತ್ತರು. ಈ ಯುದ್ಧದಿಂದ ಭಾರತ ಮತ್ತು ಪಾಕಿಸ್ತಾನದ ಸಾವಿರಾರು ಸೈನಿಕರು ಪ್ರಾಣ ಕಳೆದುಕೊಂಡರು. ಆನಂತರ ಅಮೆರಿಕ ಮತ್ತು ಸೋವಿಯತ್ ರಶ್ಯ ಮಧ್ಯಪ್ರವೇಶಿಸಿ ಯುದ್ಧಕ್ಕೆ ಅಂತ್ಯ ಹಾಡಲು ನಿರ್ಧರಿಸಿದವು. 1965ರ ಸೆ.22ರಂದು ರಶ್ಯದ ತಾಷ್ಕೆಂಟ್( ಈಗ ಉಝ್ಬೇಕಿಸ್ತಾನ್‌ದಲ್ಲಿದೆ) ಯುದ್ಧ ವಿರಾಮಕ್ಕೆ ಭಾರತ ಮತ್ತು ಪಾಕಿಸ್ತಾನ ಸಹಿ ಹಾಕಿದವು. ಪರಸ್ಪರ ಗೆದ್ದ ಭೂಭಾಗಗಳನ್ನು, ಯುದ್ಧಕೈದಿಗಳನ್ನು ಹಿಂದಿರುಗಿಸಿದವು.

1980: ಇರಾಕ್ ಇರಾನ್ ಮೇಲೆ ಆಕ್ರಮಣ ಮಾಡಿತು.

2013: ಪಾಕಿಸ್ತಾನದ ಪೇಶಾವರದಲ್ಲಿರುವ ಕ್ರಿಶ್ಚಿಯನ್ ಚರ್ಚ್‌ನಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆದ ಪರಿಣಾಮ ಸುಮಾರು 75 ಜನರು ಮೃತಪಟ್ಟ ಘಟನೆ ವರದಿಯಾಗಿದೆ.

1991: ಮರಾಠಿ, ಹಿಂದಿ ಚಿತ್ರರಂಗದ ಖ್ಯಾತ ನಟಿ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ದುರ್ಗಾ ಕೋಟೆ ನಿಧನರಾದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)