Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ವಿಟ್ಲ ನಾಡಕಚೇರಿ: ಆಧಾರ್ ನೋಂದಣಿಗೆ...

ವಿಟ್ಲ ನಾಡಕಚೇರಿ: ಆಧಾರ್ ನೋಂದಣಿಗೆ ವರ್ಷದ ಟೋಕನ್!

ಮುಂದಿನ ಆಧಾರ್ ನೋಂದಣಿ ಟೋಕನ್ 2020ರ ಫೆಬ್ರವರಿಗೆ

ಅಬ್ದುಲ್ ರಹಿಮಾನ್ ತಲಪಾಡಿಅಬ್ದುಲ್ ರಹಿಮಾನ್ ತಲಪಾಡಿ23 Sept 2019 10:42 AM IST
share
ವಿಟ್ಲ ನಾಡಕಚೇರಿ: ಆಧಾರ್ ನೋಂದಣಿಗೆ ವರ್ಷದ ಟೋಕನ್!

ವಿಟ್ಲ, ಸೆ.22: ಬಂಟ್ವಾಳ ತಾಲೂಕಿನದೇ ಗ್ರಾಮೀಣ ಭಾಗವಾಗಿರುವ ವಿಟ್ಲದಲ್ಲಿ ಕಾರ್ಯಾಚರಿಸುತ್ತಿರುವ ನಾಡಕಚೇರಿಯು ಅವ್ಯವಸ್ಥೆಯಿಂದ ಕೂಡಿದೆ. ಸಮರ್ಪಕ ನಿರ್ವಹಣೆಯಿಲ್ಲದ ದಾಖಲೆ ಪಡೆದುಕೊಳ್ಳಲು ಸಾರ್ವಜನಿಕರು ಪರದಾಟ ಅನುಭವಿಸಬೇಕಾಗಿದೆ.

ಕುಸಿದು ಬೀಳುವ ಹಂತದಲ್ಲಿರುವ ನಾದುರಸ್ತಿ ಕಟ್ಟಡದಲ್ಲಿ ಒಂದೇ ಕಡೆ ಹಲವು ನಾಗರಿಕ ಸೇವೆಗಳ ಕೇಂದ್ರಗಳು ಬೀಡುಬಿಟ್ಟಿದೆ. ಅದಲ್ಲದೆ, ಕಚೇರಿು ಹೊರಭಾಗದಲ್ಲಿ ಕಸದ ರಾಶಿ ಹಾಕಲಾಗಿದೆ. ಸಾರ್ವಜನಿಕರು ನಾಡಕಚೇರಿಗೆ ಮುಂಭಾಗದಲ್ಲಿ ಬಂದರೆ ಕುಳಿತುಕೊಳ್ಳಲು ಸ್ಥಳಾವಕಾಶ ಇಲ್ಲ. ಆಧಾರ್ ಕೇಂದ್ರದಲ್ಲಿ ಜನ ಸಾಲು ನಿಲ್ಲುವ ಪಕ್ಕದಲ್ಲೇ ಶೌಚಾಲಯವಿದ್ದು, ಕಚೇರಿ ಕಟ್ಟಡಕ್ಕೆ ತೆರಳಲು ಸಮರ್ಪಕ ದಾರಿ ವ್ಯವಸ್ಥೆಯೂ ಇಲ್ಲ ಎಂಬುವುದು ಸಾರ್ವಜನಿಕರ ಆರೋಪ.

ಆಧಾರ್ ನೋಂದಣಿಗೆ ವರ್ಷದ ಟೋಕನ್: 

ವಿಟ್ಲ ನಾಡಕಚೇರಿಯಲ್ಲಿರುವ ಆಧಾರ್ ಕೇಂದ್ರದಲ್ಲಿ ಆಧಾರ್ ನೋಂದಣಿ ಅಥವಾ ತಿದ್ದುಪಡಿಗಾಗಿ ಒಂದು ವರ್ಷದ ಟೋಕನ್‌ಗಳನ್ನು ಒಂದೇ ಬಾರಿಗೆ ನೀಡಲಾಗಿದೆ. ತುರ್ತು ಕಾರ್ಯಗಳಿಗೆ ಆಧಾರ್ ನೋಂದಣಿ ಅಥವಾ ತಿದ್ದುಪಡಿಗೆ ಬರುವವರಿಗೆ ಟೋಕನ್ ನೆಪದಲ್ಲಿ ತೊಂದರೆ ಅನುಭವಿಸುವಂತಾಗಿದೆ. ವರ್ಷ ಪೂರ್ತಿಯ ಟೋಕನ್ ಏಕಕಾಲದಲ್ಲಿ ನೀಡಲಾಗುತ್ತಿರುವುದರಿಂದ ಆಧಾರ್ ಕಾರ್ಡ್ ನೋಂದಣಿ ಸಮಸ್ಯೆಯಾಗಿ ಕಾಡುತ್ತಿದೆ ಎಂದು ಇಲ್ಲಿನ ಸಾರ್ವಜನಿಕರು ಆರೋಪಿಸುತ್ತಾರೆ.

ಕಚೇರಿಗೆ ಸೂಕ್ತ ಕಾಯಕಲ್ಪ ಒದಗಿಸಿ: ದೂರದ ಹಳ್ಳಿಗಳಿಂದ ಬರುವ ಜನ ಬೆಳಗ್ಗೆಯಿಂದಲೇ ನಾಡ ಕಚೇರಿ ಮುಂದೆ ಸಾಲುಗಟ್ಟಿ ನಿಂತರೂ ಬೇಕಾದ ಸೌಲಭ್ಯ ದೊರಕದಾಗಿದೆ. ಬೇಸಾಯದ ಕೆಲಸ ಕಾರ್ಯ ಬಿಟ್ಟು ಬಂದರೆ ಫಲ ಸಿಗದೆ ಮತ್ತೆ ಊರಿಗೆ ಕೆಲಸವಾಗದೆ ಬರಿಗೈಲಿ ತೆರಬೇಕಾದ ಪರಿಸ್ಥಿತಿ ಜನರಿಗೆ ಬಂದಿದೆ. ಜೊತೆಗೆ ಬಡವರು ಅಂದಿನ ದಿನಗೂಲಿ ಬಿಟ್ಟು ಅಲೆಯುವಂತಾಗಿದೆ. ಒಟ್ಟಿನಲ್ಲಿ ವಿಟ್ಲ ನಾಡಕಚೇರಿ ಅವ್ಯವಸ್ಥೆಯ ಪರಿಣಮಿಸಿದ್ದು, ಜನ ಸಮಸ್ಯೆಗಳ ಮೇಲೆ ಸಮಸ್ಯೆ ಎದುರಿಸುತ್ತಿದ್ದಾರೆ. ಒಂದೋ ಇಲ್ಲಿನ ಕಚೇರಿಗೆ ಸೂಕ್ತ ಕಾಯಕಲ್ಪಒದಗಿಸಿ ಇಲ್ಲವೇ ಇಲ್ಲಿನ ಸರಕಾರಿ ಕಚೇರಿಗಳನ್ನೂ ಬಿ.ಸಿ.ರೋಡ್ ಮಿನಿ ವಿಧಾನಸೌಧಕ್ಕೆ ಸ್ಥಳಾಂತರಿಸಿ ಜನರಿಗೆ ಸಮರ್ಪಕ ಸೇವೆ ಒದಗಿಸುವಂತೆ ಸಾರ್ವಜನಿಕರ ಆಗ್ರಹವಾಗಿದೆ.


ದಿನಕ್ಕೆ 40ಕ್ಕೂ ಹೆಚ್ಚು ಆಧಾರ್ ಕಾರ್ಡ್ ಟೋಕನ್ ನೀಡಲಾಗುತ್ತಿದೆ. ಅದೇ ರೀತಿ ಟೋಕನ್‌ಗಾಗಿ ಬಂದ ಎಲ್ಲರಿಗೂ ಟೋಕನ್ ನೀಡಲಾಗುತ್ತಿದೆ. ಇದೀಗ 2020ರ ಜನವರಿ ತಿಂಗಳ ಭರ್ತಿಯಾಗಿದೆ. ಆದರೆ, ಸಾರ್ವಜನಿಕರಿಗೆ ತುರ್ತು ಕಾರ್ಯಗಳಿಗೆ ಆಧಾರ್ ನೋಂದಣಿ ಅಥವಾ ತಿದ್ದುಪಡಿ ಮಾಡಿಕೊಡಲಾಗುತ್ತಿದೆ.

-ರವಿಶಂಕರ್, ಉಪ ತಹಶೀಲ್ದಾರ್ ವಿಟ್ಲ


2020ರ ಜನವರಿಯ ಟೋಕನ್ ಭರ್ತಿ
2020ರ ಜನವರಿ 31ರವರೆಗಿನ ಆಧಾರ್ ಕಾರ್ಡ್ ಟೋಕನ್‌ಗಳು ಭರ್ತಿಯಾಗಿವೆ. ಮುಂದಿನ ಆಧಾರ್ ಟೋಕನ್‌ಗಳನ್ನು 2020ರ ಫೆಬ್ರವರಿ 1ರಂದು ಒಂದು ದಿನ ಮಾತ್ರ ನೀಡಲಾಗುವುದು ಎನ್ನುವ ಪ್ರಕಟನೆೆಯೊಂದನ್ನು ನಾಡಕಚೇರಿಯ ಗೋಡೆಗೆ ಅಂಟಿಸಲಾಗಿದೆ. ಇದರಿಂದ ಸಾರ್ವಜನಿಕರಿಗೆ ಆಧಾರ್ ಟೋಕನ್‌ಗಾಗಿ ನಾಲ್ಕು ತಿಂಗಳು ಕಾಯುವಂತಹ ಪರಿಸ್ಥಿತಿ ಎದುರಾಗಿದೆ.


ವಿಟ್ಲ ನಾಡಕಚೇರಿಯಲ್ಲಿ ಕೆಲವು ಗ್ರಾಪಂಗಳ ಸದಸ್ಯರೇ ಏಜೆಂಟ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ. ಕೆಲವು ಪಂಚಾಯತ್ ಸದಸ್ಯರೇ ಹಣಕೊಟ್ಟು ಟೋಕನ್‌ಗಳನ್ನು ಖರೀದಿಸಿ ಮಾರಾಟ ಮಾಡುತ್ತಿದ್ದಾರೆ. ಇನ್ನು ಕೆಲವು ಕೆಲಸಗಳು ಅನಧಿಕೃತವಾಗಿ ನಡೆಯುತ್ತವೆ. ಇದರಿಂದ ಸಾರ್ವಜನಿಕರು ಅಗತ್ಯ ಕಾರ್ಯಗಳಿಗೆ ತೊಂದರೆ ಅನುಭವಿಸುವಂತಾಗಿದೆ.

-ರಾಮಣ್ಣ ವಿಟ್ಲ

share
ಅಬ್ದುಲ್ ರಹಿಮಾನ್ ತಲಪಾಡಿ
ಅಬ್ದುಲ್ ರಹಿಮಾನ್ ತಲಪಾಡಿ
Next Story
X