ಅಪರಿಚಿತ ಶವ ಪತ್ತೆ: ವಾರಸುದಾರರು ಸಂಪರ್ಕಿಸಲು ಮನವಿ
ಬೆಂಗಳೂರು, ಸೆ.27: ಇಲ್ಲಿನ ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವೃದ್ಧೆಯೊಬ್ಬರು ಸೇರಿ ಎರಡು ಮೃತ ದೇಹಗಳು ಪತ್ತೆಯಾಗಿದ್ದು, ವಾರಸುದಾರರು ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ.
ಸುಮಾರು 80 ವರ್ಷದ ನರಸಮ್ಮ ಎಂಬಾಕೆ ಇತ್ತೀಚಿಗೆ ಅಸ್ವಸ್ಥರಾಗಿ ರಸ್ತೆ ಬಳಿ ಮಲಗಿದ್ದರು. ಬಳಿಕ ಚಿಕಿತ್ಸೆಗಾಗಿ ಬನ್ನೇರುಘಟ್ಟ ವ್ಯಾಪ್ತಿಯ ಖಾಸಗಿ ಆಸ್ಪತ್ರೆಗೆ ಪೊಲೀಸ್ ಸಿಬ್ಬಂದಿ ರವಾನೆ ಮಾಡಿದ್ದು, ಅಂದಿನಿಂದ ಆಸ್ಪತ್ರೆಯಲ್ಲಿಯೇ ಆರೈಕೆ ಮಾಡಲಾಗಿತ್ತು. ಆದರೆ, ಸೆ.17ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ನರಸಮ್ಮ ಅವರ ಬಲಭಾಗದ ಕಣ್ಣಿನ ಕೆಳಭಾಗ, ಕಪ್ಪು ಬಣ್ಣದ ಮಚ್ಚೆ ಇದ್ದು, 5.2 ಅಡಿ ಎತ್ತರವಾಗಿದ್ದಾರೆ.
ಅಲ್ಲದೇ, ಹಲಸೂರು ಗೇಟ್ ವ್ಯಾಪ್ತಿಯಲ್ಲಿ 30 ವರ್ಷದ ಯುವಕನೋರ್ವನ ಮತ್ತೊಂದು ಶವ ಪತ್ತೆಯಾಗಿದೆ. ಬಲಭಾಗದ ಹಣೆಯ ಮೇಲೆ ಕಪ್ಪು ಬಣ್ಣದ ಮಚ್ಚೆ ಇದ್ದು, 5.3 ಅಡಿ ಎತ್ತರ, ಕಪ್ಪುಮೈಬಣ್ಣ, ಸಾಧಾರಣ ದೇಹ ಹೊಂದಿದ್ದಾನೆ.
ಈ ಸಂಬಂಧ ಮೃತ ದೇಹಗಳ ಬಗ್ಗೆ ಮಾಹಿತಿ ಇದ್ದಲ್ಲಿ, ಹಲಸೂರು ಗೇಟ್ ಪೊಲೀಸ್ ಠಾಣೆಗೆ ಭೇಟಿ ನೀಡಬಹುದು. ಅಥವಾ ದೂರವಾಣಿ ಸಂಖ್ಯೆ 080 -22942579, ಮೊಬೈಲ್ ಸಂಖ್ಯೆ 94808 01115 ಸಂಪರ್ಕಿಸಬಹುದು ಎಂದು ಠಾಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.