varthabharthi


ಈ ದಿನ

ಆರತಿ ಸಹಾ ಈಜು ಸಾಧನೆ

ವಾರ್ತಾ ಭಾರತಿ : 29 Sep, 2019

1911: ಇಟಲಿಯು ಟರ್ಕಿಯ ಮೇಲೆ ಯುದ್ಧ ಘೋಷಿಸಿತು. ಆ ಮೂಲಕ ಇಟಾಲೊ-ಟರ್ಕಿಶ್ ಯುದ್ಧ ಆರಂಭವಾಯಿತು.

1915: ಮಿಸಿಸಿಪ್ಪಿ ಮುಖಜ ಭೂಮಿಯಲ್ಲಿ ಬೀಸಿದ ಪ್ರಬಲ ಚಂಡಮಾರುತದಲ್ಲಿ 275 ಜನ ಸಾವನ್ನಪ್ಪಿದರು.

1925: ಗ್ರೀಕ್ ಗಣರಾಜ್ಯದಲ್ಲಿ ಸಂವಿಧಾನ ಜಾರಿಗೆ ಬಂದಿತು.

1941: ಉಕ್ರೇನ್‌ನ ಕೀವ್ ಸಮೀಪದ ಬಾಬಿ ಯಾರ್ ಎಂಬ ಪ್ರದೇಶದಲ್ಲಿ ನಾಝಿ ಆಕ್ರಮಣದಲ್ಲಿ ಸುಮಾರು 33,000 ಯಹೂದಿಗಳು ಹತ್ಯೆಗೀಡಾದ ಘಟನೆ ವರದಿಯಾಗಿದೆ.

1957: ಪಶ್ಚಿಮ ಪಾಕಿಸ್ತಾನದಲ್ಲಿ ಪ್ರಯಾಣಿಕ ರೈಲು ಮತ್ತು ಆಯಿಲ್ ಹೊತ್ತ ರೈಲಿನ ನಡುವೆ ಢಿಕ್ಕಿ ಸಂಭವಿಸಿ ಸುಮಾರು 300 ಜನರು ಸಾವನ್ನಪ್ಪಿದರು.

1959: ಇಂಗ್ಲಿಷ್ ಕಾಲುವೆ ಈಜುವುದು ಅತ್ಯಂತ ಕಠಿಣ ಎಂದು ಹೇಳಲಾಗುತ್ತದೆ. ಏಕೆಂದರೆ ಕಾಲುವೆಯ ಉದ್ದ, ಮೈಕೊರೆಯುವ ತಣ್ಣನೆಯ ನೀರು ಮತ್ತು ಅಪಾಯ ಕಾರಿ ಪ್ರಯಾಣ ಈ ಭಾವನೆ ಬರಲು ಕಾರಣವಾಗಿವೆೆ. ಇವೆಲ್ಲವುಗಳನ್ನು ಮೀರಿ 1959ರ ಸೆ.29ರಂದು ಭಾರತದ ಆರತಿ ಸಹಾ ಈ ಕಾಲುವೆಯನ್ನು ಈಜುವ ಮೂಲಕ ಆ ಸಾಧನೆ ಮಾಡಿದ ಏಶ್ಯದ ಮೊದಲ ಮಹಿಳೆ ಎಂಬ ಸಾಧನೆಗೆ ಪಾತ್ರರಾದರು.

1988: ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗಳಿಗೆ ನೊಬೆಲ್ ಪ್ರಶಸ್ತಿ ಘೋಷಿಸಲಾಯಿತು.

1932: ಭಾರತದ ಖ್ಯಾತ ಹಿಂದಿ ನಟ, ಗಾಯಕ, ನಿರ್ದೇಶಕ, ನಿರ್ಮಾಪಕ ಮೆಹಮೂದ್ ಅಲಿ ಜನ್ಮದಿನ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)