ನಿಮ್ಮಲ್ಲಿ ಈ ಐಫೋನ್ ಗಳಿದ್ದರೆ ವಾಟ್ಸ್ಯಾಪ್ ಬಳಕೆ ಇನ್ನು ಕೆಲವು ದಿನಗಳು ಮಾತ್ರ!
ನೀವು ನಿಮ್ಮ ಐಫೋನನ್ನು ಇತ್ತೀಚೆಗೆ ಅಪ್ ಗ್ರೇಡ್ ಮಾಡಿಲ್ಲ ಎಂದಾದರೆ ಇನ್ನು ಮುಂದೆ ನಿಮಗೆ ವಾಟ್ಸ್ಯಾಪ್ ಬಳಕೆ ಸಾಧ್ಯವಾಗದೇ ಇರಬಹುದು!...
ಹೌದು, ವಾಟ್ಸ್ಯಾಪ್ ಬಳಸುವುದಕ್ಕಾಗಿ ಪ್ರತಿಯೊಬ್ಬ ಐಫೋನ್ ಬಳಕೆದಾರನೂ ಕನಿಷ್ಠ ಐಒಎಸ್ 9 ಹೊಂದಿರಬೇಕು ಎಂದು ವಾಟ್ಸ್ಯಾಪ್ ನಿರ್ದೇಶಿಸಿದೆ. ನೀವಿನ್ನೂ 2014ರಲ್ಲಿ ಬಿಡುಗಡೆಯಾದ ಐಒಎಸ್ 8ರಲ್ಲೇ ಇದ್ದೀರಿ ಎಂದಾದರೆ ನಿಮಗೆ ಹೊಸ ಅಕೌಂಟ್ ತೆರೆಯುವುದಾಗಲೀ, ಈಗಾಗಲೇ ಇರುವ ಖಾತೆಗಳನ್ನು ರಿವೆರಿಫೈ ಮಾಡುವುದಾಗಲೀ ಸಾಧ್ಯವಾಗುವುದಿಲ್ಲ.
2020ರ ಫೆಬ್ರವರಿ 2ರಂದು ಈ ನಿಯಮ ಜಾರಿಗೆ ಬರಲಿದೆ. ಮುಂದಿನ ವರ್ಷದ ಫೆಬ್ರವರಿ 1ರವರೆಗೆ ಐಒಎಸ್ 8 ಬಳಕೆದಾರರು ವಾಟ್ಸ್ಯಾಪ್ ಬಳಕೆಯನ್ನು ಮುಂದುವರಿಸಬಹುದು.
Next Story