ಯೆಮನ್: 55 ನಾವಿಕರಿದ್ದ ಹಡಗು ನಾಪತ್ತೆ
ಆ್ಯಡೆನ್,ಸೆ.29: ಯೆಮನ್‌ನ ಪೂರ್ವ ಕರಾವಳಿಯ ಸಮೀಪದ ಸೊಕೊತ್ರಾ ದ್ವೀಪ ಪ್ರದೇಶದ ಹಿಂದೂ ಮಹಾಸಾಗರದಲ್ಲಿ 55 ಮಂದಿಯನ್ನು ಕೊಂಡೊಯ್ಯುತ್ತಿದ್ದ ನೌಕೆಯು ನಾಪತ್ತೆಯಾಗಿರುವುದಾಗಿ ತಿಳಿದುಬಂದಿದೆ.
‘‘ನೌಕೆಯು ಮಾಹ್ರಾ ಬಂದರನ್ನು ತೊರೆದು ಸೊಕೊತ್ರಾ ದ್ವೀಪದೆಡೆಗೆ ಸಾಗುತ್ತಿದ್ದಾಗ ನಾಪತ್ತೆಯಾಗಿದೆಯೆಂದು ಕ್ಸಿನುವಾ ಸುದ್ದಿಸಂಸ್ಥೆ ವರದಿ ಮಾಡಿದೆ.
‘‘ನೌಕೆಯು ಕಣ್ಮರೆಯಾದ ಮಾಹಿತಿ ದೊರೆತ ಬಳಿಕ ಸೌದಿ ನೇತೃತ್ವದ ಮೈತ್ರಿಪಡೆಯ ಜೊತೆ ಸಮರ್ಪಕವಾದ ಸಂವಹನಗಳನ್ನು ನಾವು ನಡೆಸಿದ್ದೇವೆ. ನೌಕೆಗಾಗಿ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ” ಎಂದು ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Next Story