ಈ ದಿನ
ಕೋಲ್ಕತಾ ಚಂಡಮಾರುತ ಮತ್ತು ಪ್ರವಾಹಕ್ಕೆ 60,000 ಜನರ ಬಲಿ
1864: ಕೋಲ್ಕತಾ ನಗರದಲ್ಲಿ ಚಂಡಮಾರುತ ಮತ್ತು ಪ್ರವಾಹಕ್ಕೆ ಸುಮಾರು 60,000 ಜನರು ಮೃತಪಟ್ಟ ಘಟನೆ ವರದಿಯಾಗಿದೆ. ದುರಂತದ ನಂತರ ಉಂಟಾದ ರೋಗರುಜಿನಗಳಿಂದಲೇ ಸಾವಿರಾರು ಜನರು ಅಸುನೀಗಿದರು.
1905: ಅಮೆರಿಕದ ಓರ್ವಿಲ್ಲೆ ರೈಟ್ ಮತ್ತು ವಿಲ್ಬರ್ಟ್ ರೈಟ್ ಸಹೋದರರು ತಯಾರಿಸಿದ್ದ ‘ಫ್ಲೈಯರ್ 3’ ಎಂಬ ವಿಮಾನವು 38.5 ಕಿ.ಮೀ.ವರೆಗೆ ಚಲಿಸಿತು.
1908: ಟರ್ಕಿಯ ಅಧೀನದಲ್ಲಿದ್ದ ಬಲ್ಗೇರಿಯಾ ಸ್ವಾತಂತ್ರ ಘೋಷಿಸಿಕೊಂಡಿತು.
1910: ರಾಜಪ್ರಭುತ್ವವಿದ್ದ ಪೋರ್ಚುಗಲ್ ಗಣರಾಜ್ಯವಾಗಿ ಬದಲಾಯಿತು.
1954: ಕೆರಿಬಿಯನ್ ಪ್ರದೇಶದ ಬಹಾಮಾಸ್ ಮತ್ತು ಹೈಟಿಯಲ್ಲಿ ಬೀಸಿದ ಹೆಝೆಲ್ ಹೆಸರಿನ ಚಂಡಮಾರುತಕ್ಕೆ 400ಕ್ಕಿಂತ ಹೆಚ್ಚು ಜನ ಬಲಿಯಾದರು.
1978: ಪೋಲ್ಯಾಂಡ್‌ನ ಖ್ಯಾತ ಗಾಯಕ ಇಸಾಕ್ ಬಾಷೆವಿಸ್ ನೊಬೆಲ್ ಪ್ರಶಸ್ತಿಗೆ ಭಾಜನರಾದರು.
1988: ಬ್ರೆಝಿಲ್‌ನಿಂದ ಸಂವಿಧಾನ ಅಂಗೀಕಾರ.
1991: ಇಂಡೋನೇಶ್ಯದ ವಾಯುಪಡೆಯ ವಿಮಾನ ಅಪಘಾತದಲ್ಲಿ 135 ಜನರು ಮೃತಪಟ್ಟರು.
2005: ಅಮೆರಿಕದ ಸ್ಟೀಫಾನೆ ಮೇಯರ್ ಬರೆದ ಜನಪ್ರಿಯ ಇಂಗ್ಲಿಷ್ ಕಾದಂಬರಿ ‘ಟ್ವಿಲೈಟ್’ ಪ್ರಕಟಗೊಂಡಿತು.
2011: ಅಗ್ಗದ ದರದ ಟ್ಯಾಬ್ಲೆಟ್ ಕಂಪ್ಯೂಟರ್ ‘ಆಕಾಶ್’ ಅನ್ನು ಭಾರತ ಸರಕಾರ ದಿಲ್ಲಿಯಲ್ಲಿ ಬಿಡುಗಡೆ ಮಾಡಿತು.
1934: ನಟ, ಸಂಪಾದಕ, ರಾಜಕೀಯ ವಿಮರ್ಶಕ, ನಾಟಕಕಾರ, ವಕೀಲ ಚೋ ರಾಮಸ್ವಾಮಿ ಜನ್ಮದಿನ.