ಉತ್ತರ ಕೊರಿಯ- ಅಮೆರಿಕ ಪರಮಾಣು ಮಾತುಕತೆ ಪುನರಾರಂಭ
ಸ್ಟಾಕ್‌ಹೋಮ್, ಅ. 5: ಹಲವಾರು ತಿಂಗಳ ಬಿಕ್ಕಟ್ಟಿನ ಬಳಿಕ, ಅಮೆರಿಕ ಮತ್ತು ಉತ್ತರ ಕೊರಿಯದ ಅಧಿಕಾರಿಗಳು ಶನಿವಾರ ಸ್ವೀಡನ್ ರಾಜಧಾನಿ ಸ್ಟಾಕ್‌ಹೋಮ್‌ನಲ್ಲಿ ಪರಮಾಣು ಮಾತುಕತೆಗಳನ್ನು ಪುನರಾರಂಭಿಸಿದ್ದಾರೆ.
ಉತ್ತರ ಕೊರಿಯ ತಂಡದ ನೇತೃತ್ವವನ್ನು ಕಿಮ್ ಮಯೊಂಗ್ ಗಿಲ್ ವಹಿಸಿದರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ವಿಶೇಷ ರಾಯಭಾರಿ ಸ್ಟೀಫನ್ ಬೀಗನ್ ಅಮೆರಿಕ ತಂಡದ ನೇತೃತ್ವವನ್ನ ವಹಿಸಿದ್ದಾರೆ.
ಮಾತುಕತೆ ಪ್ರಕ್ರಿಯೆ ನಿಂತ ಬಳಿಕ, ಇತ್ತೀಚಿನ ದಿನಗಳಲ್ಲಿ ಉತ್ತರ ಕೊರಿಯವು ಹಲವು ಕ್ಷಿಪಣಿಗಳ ಪರೀಕ್ಷೆಗಳನ್ನು ನಡೆಸಿತ್ತು. ಈ ಮೂಲಕ ಅದು ಅಮೆರಿಕದ ಮೇಲೆ ಒತ್ತಡ ಹೇರುತ್ತಾ ಬಂದಿದೆ.
ಟ್ರಂಪ್ ಮತ್ತು ಉತ್ತರ ಕೊರಿಯ ನಾಯಕ ಕಿಮ್ ಜಾಂಗ್ ಉನ್ ನಡುವೆ ಈ ವರ್ಷದ ಫೆಬ್ರವರಿಯಲ್ಲಿ ಹನೋಯಿಯಲ್ಲಿ ನಡೆದ ಎರಡನೇ ಶೃಂಗ ಸಮ್ಮೇಳನ ಯಾವುದೇ ಒಪ್ಪಂದವಿಲ್ಲದೆ ಅರ್ಧದಲ್ಲೇ ಮುಕ್ತಾಯವಾಗಿತ್ತು.
Next Story