varthabharthi


ಈ ದಿನ

‘ಪೆನ್’ ಸಂಸ್ಥೆ ಸ್ಥಾಪನೆ

ವಾರ್ತಾ ಭಾರತಿ : 6 Oct, 2019

1889: ವಿಶ್ವವಿಖ್ಯಾತ ವಿಜ್ಞಾನಿ ಥಾಮಸ್ ಆಲ್ವಾ ಎಡಿಸನ್ ಮೊದಲ ಬಾರಿಗೆ ಚಲನಚಿತ್ರ(ಮೋಶನ್ ಫಿಕ್ಟರ್)ವನ್ನು ಪ್ರದರ್ಶಿಸಿದರು.

1917: ಮೂರನೇ ವೈಪ್ರೆಸ್ ಯುದ್ಧದಲ್ಲಿ ಕೆನಡಾದ ಸೈನ್ಯವು ಪಾಸ್‌ಚೆಂಡೇಲ್ ಹಳ್ಳಿಯನ್ನು ವಶಪಡಿಸಿಕೊಂಡಿತು. ಈ ಸಂದರ್ಭದಲ್ಲಿ ಉಂಟಾದ ಸಂಘರ್ಷದಲ್ಲಿ ಒಟ್ಟು ಸುಮಾರು 2,00,000 ಜನರು ಮೃತಪಟ್ಟ ಘಟನೆ ವರದಿಯಾಗಿದೆ.

1918: ಅಮೆರಿಕದ ಹಡಗು ಒಟ್ರಾಂಟೊ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್‌ಗಳ ಮಧ್ಯೆ ಸಮುದ್ರದಲ್ಲಿ ಮುಳುಗಿತು. ಈ ಸಂದರ್ಭದಲ್ಲಿ ಸುಮಾರು 425 ಜನರು ಮೃತಪಟ್ಟರು.

1921: ಬರಹಗಾರರ ಒಕ್ಕೂಟವಾದ ‘ಪೆನ್’ ಅಂತರ್‌ರಾಷ್ಟ್ರೀಯ ಸಂಸ್ಥೆ ಸ್ಥಾಪನೆಯಾಯಿತು.

1939: ವಿಶ್ವ 2ನೇ ಮಹಾಯುದ್ಧದಲ್ಲಿ ಪೋಲ್ಯಾಂಡ್‌ನ ಕೊನೆಯ ಸೈನ್ಯವು ಸೋಲಲ್ಪಟ್ಟಿತು.

1948: ತುರ್ಕ್‌ಮೆನಿಸ್ತಾನ್‌ನ ಅಶಗಬಾಟ್ ಎಂಬಲ್ಲಿ ಸಂಭವಿಸಿದ ಪ್ರಬಲ ಭೂಕಂಪಕ್ಕೆ ಲಕ್ಷಕ್ಕೂ ಹೆಚ್ಚು ಜನರು ಮೃತಪಟ್ಟ ಘಟನೆ ವರದಿಯಾಗಿದೆ. 7.3 ಕಂಪನಾಂಕಗಳಲ್ಲಿ ತನ್ನ ಆಟಾಟೋಪ ತೋರಿದ್ದ ಈ ಕಂಪನವು ತುರ್ಕ್‌ಮೆನಿಸ್ತಾನ್‌ನ ಬಹಳಷ್ಟು ಕಟ್ಟಡಗಳನ್ನು ನುಂಗಿತು.

1951: ಸೋವಿಯತ್ ಒಕ್ಕೂಟವು ಪರಮಾಣು ಬಾಂಬ್ ಹೊಂದಿರುವುದಾಗಿ ಆ ರಾಷ್ಟ್ರದ ಮುಖ್ಯಸ್ಥ ಜೋಸೆಫ್ ಸ್ಟಾಲಿನ್ ಘೋಷಿಸಿದರು.

1980: ಗಯಾನಾ ದೇಶದಿಂದ ಸಂವಿಧಾನ ಅಂಗೀಕಾರ.

2010: ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಮ್‌ನ್ನು ಪ್ರಾರಂಭಿಸಲಾಯಿತು.

2013: ಈಜಿಪ್ಟ್‌ನಲ್ಲಿ ನಡೆದ ರಾಜಕೀಯ ಸಂಘರ್ಷಗಳಲ್ಲಿ 53 ಜನರು ಹತರಾದ ಘಟನೆ ನಡೆಯಿತು.

2015: ನ್ಯೂಟ್ರಿನೊಗಳ ಬಗ್ಗೆ ನಡೆಸಿದ ಸುದೀರ್ಘ ಅಧ್ಯಯನಕ್ಕೆ ಜಪಾನ್‌ನ ತಕಾಕಿ ಕಜಿತ ಮತ್ತು ಕೆನಡಾದ ಅರ್ಥರ್ ಮೆಕ್‌ಡೊನಾಲ್ಡ್‌ಗೆ ಭೌತಶಾಸ್ತ್ರದ ನೊಬೆಲ್ ಪ್ರದಾನ ಮಾಡಲಾಯಿತು.

2017: ಬ್ರಿಟಿಷ್ ಬರಹಗಾರ ಕಜುವೊ ಇಷಿಗ್ಯುರೊಗೆ ಸಾಹಿತ್ಯದ ನೊಬೆಲ್ ಪ್ರದಾನಿಸಲಾಯಿತು.

1893: ಭಾರತದ ಖ್ಯಾತ ಖಗೋಳವಿಜ್ಞಾನಿ ಮೇಘನಾದ್ ಸಹಾ ಜನ್ಮದಿನ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)