ಕಂಪೆನಿ ದತ್ತಾಂಶ ಕಳವು ಪ್ರಕರಣ: ಆರೋಪಿ ಬಂಧನ
ಬೆಂಗಳೂರು, ಅ.6: ಖಾಸಗಿ ಕಂಪೆನಿಯೊಂದರ ದತ್ತಾಂಶ ಕಳವು ಮಾಡಿದ ಆರೋಪದಡಿ ಓರ್ವನನ್ನು ಸಿಸಿಬಿ ಪೊಲೀಸರು ಬಂಧಿಸಿ, ವಿಚಾರಣೆ ಗೊಳಪಡಿಸಿದ್ದಾರೆ.
ಕಗ್ಗಲಿಪುರದ ಕಾಮಿನ್ ಪ್ರಜಾಪತಿ (40)ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿ ಖಾಸಗಿ ಕಂಪೆನಿಯೊಂದರಲ್ಲಿ ಹಿರಿಯ ಲೆಕ್ಕಾಧಿಕಾರಿ (ಸೀನಿಯರ್ ಅಕೌಂಟ್ ಮ್ಯಾನೇಜರ್) ಆಗಿ ಕೆಲಸ ಮಾಡುತ್ತಿದ್ದು, ಈ ವೇಳೆ ಕಂಪೆನಿಯ ಗ್ರಾಹಕರ ಬ್ಯಾಂಕ್ ಖಾತೆ, ಕ್ರೆಡಿಟ್ ಕಾರ್ಡ್, ಪೇ ರೋಲ್, ಇನ್ನಿತರ ಮಾಹಿತಿಯನ್ನು ಪಡೆದುಕೊಂಡು ತನ್ನ ಇ-ಮೇಲ್‌ಗೆ ರವಾನಿಸಿಕೊಂಡಿದ್ದ ಎನ್ನಲಾಗಿದೆ.
ಕಂಪೆನಿಯಿಂದ ಕೆಲಸ ಬಿಟ್ಟ ನಂತರ, ಆತ ಗ್ರಾಹಕರ ಮಾಹಿತಿಯಿಂದ ವಂಚನೆ ಮಾಡಿರುವುದು ಕಂಡುಬಂದಿದ್ದು, ಖಾಸಗಿ ಕಂಪೆನಿಯವರು ನೀಡಿದ್ದ ದೂರು ಆಧರಿಸಿ, ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಸಿಸಿಬಿ ತಿಳಿಸಿದೆ.
Next Story