‘ಶಸ್ತ್ರ ಪೂಜೆ’ಯಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ ಆರೆಸ್ಸೆಸ್ ಸದಸ್ಯರು !
ಫೊಟೋ ಕೃಪೆ: ANI
ಲಕ್ನೊ, ಅ. 8: ದಸರಾ ಉತ್ಸವದ ಒಂದು ಭಾಗವಾಗಿ ಆರೆಸ್ಸೆಸ್ ಇಲ್ಲಿ ಮಂಗಳವಾರ ನಡೆಸಿದ ‘ಶಸ್ತ್ರ ಪೂಜೆ’ಯಲ್ಲಿ ಸದಸ್ಯರು ರೈಫಲ್ ಹಾಗೂ ಪಿಸ್ತೂಲ್ ಬಳಸಿ ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ನಡೆದಿದೆ.
ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಗುಂಡು ಹಾರಿಸಿದ ಬಗ್ಗೆ ಸಾಮಾಜಿಕ ಮಾದ್ಯಮದಲ್ಲಿ ವೀಡಿಯೊ ಪ್ರಸಾರವಾದ ಬಳಿಕ ನಮಗೆ ತಿಳಿಯಿತು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ನಾವು ಸೀತಾಪುರ ಪೊಲೀಸರಿಗೆ ಸೂಚನೆ ನೀಡಿದ್ದೇವೆ ಎಂದು ಎಎಸ್ಪಿ (ಉತ್ತರ) ಮಧುವನ್ ಕುಮಾರ್ ಹೇಳಿದ್ದಾರೆ.
ಗಾಳಿಯಲ್ಲಿ ಗುಂಡು ಹಾರಿಸಿದ ಕಾರ್ಯಕ್ರಮ ಆರೆಸ್ಸೆಸ್ ನ ‘ಶಸ್ತ್ರ ಪೂಜೆ’ ಎಂಬುದು ನಮಗೆ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಅವರು ತಿಳಿಸಿದ್ದಾರೆ. ಆರೆಸ್ಸೆಸ್ ನ ‘ಶಸ್ತ್ರ ಪೂಜೆ’ ಕಾರ್ಯಕ್ರಮದಲ್ಲಿ ಯಾರೆಲ್ಲ ಪಾಲ್ಗೊಂಡಿದ್ದಾರೆ ಎಂಬುದನ್ನು ಗುರುತಿಸುವ ಪ್ರಕ್ರಿಯೆಯಲ್ಲಿ ಪೊಲೀಸರು ತೊಡಗಿಕೊಂಡಿದ್ದಾರೆ. ತನಿಖೆ ಮುಂದುವರಿದಿದೆ ಎಂದು ಮಧುವನ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
Next Story