ಡಾ.ಎಚ್.ಎಸ್.ಶ್ರೀಮತಿಗೆ ಎಚ್.ಎಸ್.ಪಾರ್ವತಿ ಪ್ರಶಸ್ತಿ
ಬೆಂಗಳೂರು, ಅ.14: ಕರ್ನಾಟಕ ಲೇಖಕಿಯರ ಸಂಘದ 2019ರ ಸಾಲಿನ ಎಚ್.ಎಸ್.ಪಾರ್ವತಿ ಪ್ರಶಸ್ತಿಗೆ ಲೇಖಕಿ ಡಾ.ಎಚ್.ಎಸ್.ಶ್ರೀಮತಿ ಭಾಜನರಾಗಿದ್ದಾರೆ.
ಅ.20ರಂದು ಬೆಳಗ್ಗೆ 10.30ಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಕೃಷ್ಣರಾಜ ಪರಿಷನ್ಮಂದಿರದಲ್ಲಿ ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ. ಎಚ್.ಎಸ್. ಶ್ರೀಮತಿ ಅವರು ಎಚ್.ಎಸ್.ಪಾರ್ವತಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ ಎಂದು ಸಂಘದ ಅಧ್ಯಕ್ಷೆ ವನಮಾಲಾ ಸಂಪನ್ನಕುಮಾರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story