ಫಾರೂಕ್ ಅಬ್ದುಲ್ಲಾರ ಪುತ್ರಿ, ಸಹೋದರಿ ಸಹಿತ ಹಲವು ಮಹಿಳೆಯರು ಪೊಲೀಸ್ ವಶಕ್ಕೆ
ಶ್ರೀನಗರ, ಅ.15: 370ನೆ ವಿಧಿ ರದ್ದತಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಜಮ್ಮು ಕಾಶ್ಮೀರದ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾರ ಪುತ್ರಿ ಸಹಿತ ಹಲವು ಮಹಿಳೆಯರನ್ನು ಇಂದು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪೊಲೀಸ್ ವಶಕ್ಕೆ ಪಡೆದುಕೊಂಡವರಲ್ಲಿ ಫಾರೂಕ್ ಅಬ್ದುಲ್ಲಾರ ಸಹೋದರಿ ಸುರೈಯಾ ಅಬ್ದುಲ್ಲಾ, ಮಗಳು ಸಫಿಯಾ ಅಬ್ದುಲ್ಲಾ ಖಾನ್ ಮತ್ತು ಜಮ್ಮು ಕಾಶ್ಮೀರದ ಮಾಜಿ ಮುಖ್ಯ ನ್ಯಾಯಾಧೀಶ ಬಶೀರ್ ಅಹ್ಮದ್ ಖಾನ್ ರ ಪತ್ನಿ ಹವ್ವಾ ಬಶೀರ್ ಮೊದಲಾದವರು ಸೇರಿದ್ದಾರೆ.
ಶ್ರೀನಗರದ ಲಾಲ್ ಚೌಕದಲ್ಲಿ ಪ್ಲೇಕಾರ್ಡ್ ಗಳನ್ನು ಹಿಡಿದುಕೊಂಡಿದ್ದ ಮಹಿಳಾ ಪ್ರತಿಭಟನಕಾರರು ಸೇರಿದರು. ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಲವರನ್ನು ವಶಕ್ಕೆ ಪಡೆದುಕೊಂಡರು.
Next Story