ತುಳಸಿಸಂಕೀರ್ತನಾ ಸಪ್ತಾಹ ಸಮಾರೋಪ
ಉಡುಪಿ, ಅ.20: ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ ತುಳು ಶಿವಳ್ಳಿ ಮಾಧ್ವ ಮಹಾ ಮಂಡಲ ಉಡುಪಿ ವತಿಯಿಂದ ತುಳಸಿ ಸಂಕೀರ್ತನಾ ಸಪ್ತಾಹದ ಸಮಾರೋಪ ಸಮಾರಂಭ ರವಿವಾರ ಉಡುಪಿ ಶ್ರೀಕೃಷ್ಣ ಮಠದ ಮಧ್ವ ಮಂಟಪದಲ್ಲಿ ಜರಗಿತು.
ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ದೇವರಿಗೆ ಪ್ರತಿಯೊಂದು ಅಂಗದಿಂದಲೂ ನಡೆಸಲು ಸಾಧ್ಯವಾಗು ವಂತಹ ಪೂಜೆ ಅಂದರೆ ಸಂಕೀರ್ತನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಥಮ ಸ್ಥಾನ ಪಡೆದ ಮಕ್ಕಳ ವಿಭಾಗದಲ್ಲಿ ಕುಂಜಾರು ಗಿರಿಬಳಗದ ಕಿಶೋರ ಮಕ್ಕಳು, ಮಹಿಳಾ ವಿಭಾಗದಲ್ಲಿ ಸುರತ್ಕಲ್ಲಿನ 'ಸ್ವರಶ್ರೀ' ತಂಡದ ಮಹಿಳೆಯರು ಹಾಗೂ ಪುರುಷರ ವಿಭಾಗದಲ್ಲಿ ಕುಂಜಾರು ಗಿರಿ ಬಳಗದ ಹಿರಿಯ ಸದಸ್ಯರಿಗೆ ಬಹುಮಾನ ವಿತರಿಸಲಾಯಿತು.
Next Story