ಮ.ನ.ಪಾ ಚುನಾವಣೆಯ 5 ನೇ ವಾರ್ಡ್: ಎಸ್ಡಿಪಿಐ ಅಭ್ಯರ್ಥಿಯಾಗಿ ಸಂಶಾದ್ ಅಬೂಬಕರ್ ಆಯ್ಕೆ
ಮಂಗಳೂರು, ಅ 23 : ಮಂಗಳೂರು ಮಹಾನಗರ ಪಾಲಿಕೆಯ ವಾರ್ಡ್ ಸಂಖ್ಯೆ 5 ರ ಎಸ್ಡಿಪಿಐ ಅಭ್ಯರ್ಥಿ ಘೋಷಣಾ ಸಭೆಯು ಚೊಕ್ಕಬೆಟ್ಟು ನಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಎಸ್ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ವಹಿಸಿದ್ದರು. ಈ ಸಂದರ್ಭ ಮಾತನಾಡಿದ ಅವರು ಎಸ್ಡಿಪಿಐ ಪಕ್ಷದ ಜನಪರ ರಾಜಕೀಯವು ದ.ಕ ಜಿಲ್ಲೆಯಲ್ಲಿ ಜನರನ್ನು ಆಕರ್ಷಿಸುತ್ತಿದ್ದು ಒಂದು ಪರ್ಯಾಯ ಶಕ್ತಿಯಾಗಿ ಬೆಳೆಯಲು ಸಹಕರಿಸಿದ ಚೊಕ್ಕಬೆಟ್ಟು ಮತ್ತು ಕೃಷ್ಣಾಪುರ ನಿವಾಸಿಗಳು ಎರಡನೇ ಬಾರಿಗೆ 5 ನೇ ವಾರ್ಡಿನಲ್ಲಿ ಎಸ್ಡಿಪಿಐ ಪಕ್ಷದ ವಿಜಯ ಪತಾಕೆಯನ್ನು ಹಾರಿಬೇಕೆಂದು ಕೇಳಿಕೊಂಡರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಕಾರ್ಮಿಕ ಮುಖಂಡ ಜಲೀಲ್ ಕೃಷ್ಣಾಪುರ ಎಸ್ಡಿಪಿಐ ಪಕ್ಷದ ಗುರುತು ಸಮಾಜಸೇವೆಯೇ ಆಗಿರುವಾಗ 5 ನೇ ವಾರ್ಡಿನಲ್ಲಿ ಎಸ್ಡಿಪಿಐ ಪಕ್ಷವು ನಿರಾಯಾಸವಾಗಿ ಗೆಲ್ಲಲಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಮುಂಬರುವ ಮಹಾ ನಗರ ಪಾಲಿಕೆಯ 5 ನೇ ವಾರ್ಡಿನ ಎಸ್ಡಿಪಿಐ ಅಭ್ಯರ್ಥಿ ಯಾಗಿ ಸಂಶಾದ್ ಅಬೂಬಕರ್ ರವರನ್ನು ಘೋಷಣೆ ಮಾಡಿ ಮಾತನಾಡಿದ ಅವರು ಸರ್ವ ಕೇಡರ್, ಕಾರ್ಯಕರ್ತರು ಮತ್ತು ಹಿತೈಷಿಗಳು ಎಸ್ಡಿಪಿಐ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ರಾತ್ರಿ ಹಗಲು ಶ್ರಮ ವಹಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ಮಂಚಿ, ಸಾಮಾಜಿಕ ಮಖಂಡ ಅಝೀಝ್ ಸುರತ್ಕಲ್, ಮತ್ತು ಇತರರು ಉಪಸ್ಥಿತರಿ ದ್ದರು. ಅಯಾಝ್ ಕೃಷ್ಣಾಪುರ ಸ್ವಾಗತಿಸಿ ಅಝರ್ ಚೊಕ್ಕಬೆಟ್ಟು ವಂದಿಸಿದರು.