varthabharthi


ಈ ದಿನ

ಮತದಾನದ ಹಕ್ಕಿಗಾಗಿ ಅಮೆರಿಕದ ಮಹಿಳೆಯರಿಂದ ಧರಣಿ

ವಾರ್ತಾ ಭಾರತಿ : 26 Oct, 2019

1917: ಮತದಾನದ ಹಕ್ಕು ಒದಗಿಸಲು ಒತ್ತಾಯಿಸಿ ಸುಮಾರು 20,000 ಮಹಿಳೆಯರು ಅಮೆರಿಕದ ನ್ಯೂಯಾರ್ಕ್‌ನಲ್ಲಿ ಧರಣಿ ನಡೆಸಿದರು.

1959: ಅಪರೂಪವಾದ ಪೆಸಿಫಿಕ್ ಚಂಡಮಾರುತವು ಪಶ್ಚಿಮ ಮೆಕ್ಸಿಕೊದಲ್ಲಿ ಸುಮಾರು 2,000 ಜನರ ಸಾವಿಗೆ ಕಾರಣವಾಯಿತು.

1962: ಅಮೆರಿಕ ಜಾನ್ಸನ್ ದ್ವೀಪಪ್ರದೇಶದಲ್ಲಿ ಅಣುಬಾಂಬ್ ಪರೀಕ್ಷೆ ನಡೆಸಿತು.

1968: 19ನೇ ಒಲಿಂಪಿಕ್ಸ್ ಕ್ರೀಡೆಗಳು ಮೆಕ್ಸಿಕೊದಲ್ಲಿ ಕೊನೆಗೊಂಡವು.

1969: ಅರ್ಥಶಾಸ್ತ್ರಕ್ಕೆ ನೀಡಲಾಗುವ ಪ್ರಥಮ ನೊಬೆಲ್ ಪ್ರಶಸ್ತಿಯನ್ನು ನೆದರ್ಲೆಂಡ್‌ನ ಅರ್ಥಶಾಸ್ತ್ರಜ್ಞ ಜಾನ್ ಟಿಂಬರ್ಜೆನ್‌ಗೆ ಪ್ರದಾನಿಸಲಾಯಿತು. ಆರ್ಥಿಕ ಪ್ರಕ್ರಿಯೆಗಳ ವಿಶ್ಲೇಷಣೆಗಾಗಿ ಕ್ರಿಯಾತ್ಮಕ ಮಾದರಿಗಳ ಅಭಿವೃದ್ಧಿ ಮತ್ತು ಅವುಗಳ ಅನ್ವಯಗಳನ್ನು ವಿವರಿಸಿದ ಕಾರಣಕ್ಕಾಗಿ ಈ ಪ್ರಶಸ್ತಿಯನ್ನು ನಾರ್ವೆಯ ಅರ್ಥಶಾಸ್ತ್ರಜ್ಞ ರ್ಯಾಗ್ನರ್ ಫ್ರಿಸ್ಕ್ ಅವರೊಂದಿಗೆ ಟಿಂಬರ್ಜೆನ್ ಹಂಚಿಕೊಂಡರು.

1985: ಅಮೆರಿಕದ ಕೊಲ್ಲಿ ರಾಜ್ಯಗಳು ಹಾಗೂ ಪೂರ್ವ ಕರಾವಳಿ ಪ್ರದೇಶದಲ್ಲಿ ಬೀಸಿದ ಜುವಾನ್ ಹೆಸರಿನ ಚಂಡಮಾರುತಕ್ಕೆ 49 ಜನರು ಬಲಿಯಾದರು.

1999: ಅರ್ಮೇನಿಯದ ಸಂಸತ್ತಿನಲ್ಲಿ ಬಂದೂಕುಧಾರಿ ಉಗ್ರನೊಬ್ಬನ ಗುಂಡಿನ ದಾಳಿಗೆ ಪ್ರಧಾನಮಂತ್ರಿ ವ್ಯಾಜ್ಗೆನ್ ಸರ್ಗ್ಸ್‌ಯಾನ್ ಹಾಗೂ ಸ್ಪೀಕರ್ ಕರೆನ್ ಡೆಮಿರ್ಕ್ ಯಾನ್ ಮತ್ತು 6 ಸಂಸದರು ಬಲಿಯಾದರು. 2017: ಕ್ಯಾಟಲೊನಿಯಾ ಸ್ಪೇನ್‌ನಿಂದ ಸ್ವಾತಂತ್ರ್ಯ ಘೋಷಿಸಿಕೊಂಡಿತು.

1920: ಭಾರತದ 10ನೇ ರಾಷ್ಟ್ರಪತಿ ಕೊಚ್ಚೇರಿಯಲ್ ರಾಮನ್ ನಾರಾಯಣನ್ ಜನ್ಮದಿನ.

1968: ಮಲಯಾಳಂನ ಖ್ಯಾತ ನಟ ಮತ್ತು ನಿರ್ಮಾಪಕ ದಿಲೀಪ್ ಜನ್ಮದಿನ.

1984: ಕ್ರಿಕೆಟರ್ ಇರ್ಫಾನ್ ಪಠಾಣ್ ಜನ್ಮದಿನ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)