ತುಂಬೆ: ಮರ್ಹೂಂ ಟಿ.ಎಚ್.ಹಾಜಬ್ಬ ಕುಟುಂಬಸ್ಥರ ಸಮ್ಮಿಲನ
ಮಂಗಳೂರು, ಅ.30: ತುಂಬೆ ಟಿ.ಎಚ್.ಹಾಜಬ್ಬ ಹಾಗೂ ಐಸಮ್ಮ ಕುಟುಂಬಸ್ಥರ ಸಮ್ಮಿಲನ ಕಾರ್ಯಕ್ರಮ ‘ತರವಾಡ್ ಕೂಟ್‌ಕೆಟ್ಟ್’ ಮಂಗಳವಾರ ತುಂಬೆಯಲ್ಲಿ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎ.ಎಚ್.ತುಂಬೆ ಮಾತನಾಡಿ ಕುಟುಂಬ ಸಂಬಂಧದ ಪ್ರಾಮುಖ್ಯತೆ ಹಾಗೂ ಅದನ್ನು ಬಲಪಡಿಸುವ ಕುರಿತು ವಿವರಿಸಿದರು.
ಇದೇ ಸಂದರ್ಭ ಕಬಡ್ಡಿ ಪಂದ್ಯಾಟದಲ್ಲಿ ರಾಷ್ಟ್ರೀಯ ಮಟ್ಟಕ್ಕೆ ಪ್ರಾಥಮಿಕ ಶಾಲಾ ಮಕ್ಕಳನ್ನು ಆಯ್ಕೆಯಾಗುವಲ್ಲಿ ತರಬೇತಿ ನೀಡಿದ ದೈಹಿಕ ಶಿಕ್ಷಣ ಶಿಕ್ಷಕ ಹಾಗೂ ಈ ಕುಟುಂಬದ ಸದಸ್ಯ ಬಿ.ಹೈದರ್‌ರನ್ನು ಸನ್ಮಾನಿಸಲಾಯಿತು. ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಆದಂ ಸಾಹೇಬ್, ತಾಲೂಕು ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಹಾಜಿ ಬಿ.ಕೆ.ಫಕ್ರುದ್ದೀನ್ ಹಾಗೂ ಸಮುದಾಯ ಸೇವೆಗಾಗಿ ಉಪನ್ಯಾಸಕ ಅಬ್ದುರ್ರಝಾಕ್ ಅನಂತಾಡಿಯವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಕುಟುಂಬದ ಸದಸ್ಯರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ತರವಾಡ್ ಕೂಡ್ ಕೆಟ್ಟ್ ಆಯೋಜಕ ಬಿ.ಎಂ.ತುಂಬೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ಬಿ.ಎಂ.ರಫೀಕ್ ತುಂಬೆ ಕಾರ್ಯಕ್ರಮ ನಿರೂಪಿಸಿದರು. ಶರೀಫ್ ತುಂಬೆ ವಂದಿಸಿದರು.
ತುಂಬೆ ಮರ್ಹೂಂ ಟಿ.ಎಚ್.ಹಾಜಬ್ಬ ಕುಟುಂಬ ಟ್ರಸ್ಟ್ ನ್ನು ರಚಿಸಲಾಯಿತು.