ಜೆಸಿಐ ಗಣೇಶಪುರದ ನೂತನ ಅಧ್ಯಕ್ಷರಾಗಿ ಶರತ್ ಕುಮಾರ್ ಆಯ್ಕೆ
ಮಂಗಳೂರು, ಅ.30: ಜೆಸಿಐ ಗಣೇಶಪುರ ಘಟಕದ 2020ರ ಸಾಲಿನ ನೂತನ ಅಧ್ಯಕ್ಷರಾಗಿ ಶರತ್ ಕುಮಾರ್ ಆಯ್ಕೆಯಾಗಿದ್ದಾರೆ. ವಲಯ ತರಬೇತುದಾರರಾದ ಇವರು ಜೆಸಿಐ ಗಣೇಶಪುರದ ನಿರ್ದೇಶಕರಾಗಿ, ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಎಂಆರ್ಪಿಎಲ್ನ ಮಾನವ ಸಂಪನ್ಮೂಲ ವಿಭಾಗದಲ್ಲಿ ಸೀನಿಯರ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಜೆಸಿಐ ಗಣೇಶಪುರದ ಕಾರ್ಯದರ್ಶಿಯಾಗಿ ಭರತ್ ಕೆ., ಜೆಸಿರೆಟ್ ವಿಭಾಗದಲ್ಲಿ ಶುಭ ಶರತ್ ಹಾಗೂ ಜೆಜೆಸಿಯಾಗಿ ಚೈತ್ರಾ ಕೆ. ಕಾರ್ಯನಿರ್ವಹಿಸಲಿದ್ದಾರೆ. ಸಹ ಕಾರ್ಯದರ್ಶಿಯಾಗಿ ಅರುಣ್ ಕುಮಾರ್, ಕೋಶಾಧಿಕಾರಿಯಾಗಿ ಶಶಿಕುಮಾರ್ ನೇಮಕಗೊಂಡರು.
ಉಪಾಧ್ಯಕ್ಷರಾಗಿ ಭಾರತಿ ಶ್ರೀಶ, ಚಂದನ್, ಜೋಸ್ವಿನ್, ಆದರ್ಶ್, ಪ್ರಶಾಂತ್ ಕೆ. ಹಾಗೂ ನಿರ್ದೇಶಕರಾಗಿ ದೀಪಕ್, ಶ್ರೀನಿತ್ ಪ್ರಶಾಂತ್ ಕೆ.ಎ. ಹರ್ಷೇಂದ್ರ ನೇಮಕಗೊಂಡಿರುತ್ತಾರೆ ಎಂದು ಪ್ರಕಟನೆ ತಿಳಿಸಿದೆ.
Next Story