ನ.1ರಿಂದ 15: ಕಣಚೂರು ಆಸ್ಪತ್ರೆಯಲ್ಲಿ ಉಚಿತ ಶಸ್ತ್ರಚಿಕಿತ್ಸಾ ಶಿಬಿರ
ಮಂಗಳೂರು, ಅ.31: ದೇರಳಕಟ್ಟೆಯ ಕಣಚೂರು ಆಸ್ಪತ್ರಯಲ್ಲಿ 5 ಹೊಸ ಮೊಡ್ಯುಲರ್ ಆಪರೇಷನ್ ಥಿಯೇಟರ್ ಉದ್ಘಾಟನೆಯ ಪ್ರಯುಕ್ತ ನ.1ರಿಂದ 15ರವರೆಗೆ (ಮೊದಲ 250 ಒಳರೋಗಿಗಳಿಗೆ) ಉಚಿತ ಶಸ್ತ್ರ ಚಿಕಿತ್ಸಾ ಶಿಬಿರ ನಡೆಯಲಿದೆ.
►ಶಸ್ತ್ರ ಚಿಕಿತ್ಸಾ ವಿಭಾಗ: ಹರ್ನಿಯಾ, ಅಪೆಂಡಿಕ್ಸ್ ಥೈರಾಯಿಡ್, ವೆರಿಕೋಸ್ ವೇನ್, ಆಂಧ್ರವಾಯು, ಸ್ತನದಲ್ಲಿ ಗಂಟು.
►ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗ: ಗರ್ಭಕೋಶದ ಶಸ್ತ್ರ ಚಿಕಿತ್ಸೆ, ಹೆರಿಗೆ
►ಕಿವಿ, ಮೂಗು, ಗಂಟಲು ವಿಭಾಗ: ಗಂಟಲ ಗ್ರಂಥಿ ತೆಗೆಯುವಿಕೆ, ರಿನೋಪ್ಲಾಸ್ಟಿ, ಮೂಗಿನ ಬೆಂಡಾದ ಮೂಳೆ ಸರಿಪಡಿಸುವಿಕೆ, ಸೀಳು ತುಟಿ ಮತ್ತು ಸೀಳು ಅಂಗುಳಿನ ಶಸ್ತ್ರ ಚಿಕಿತ್ಸೆ.
►ನೇತ್ರ ವಿಭಾಗ: ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ.
►ಮೂಳೆ ಮತ್ತು ಕೀಲು ವಿಭಾಗದ ಶಸ್ತ್ರ ಚಿಕಿತ್ಸೆ.
►ಸೊಂಟ, ಮೊಣಕಾಲಿನ ಬದಲಿ ಕೀಲು ಜೋಡಣೆ.
►ಮೂಳೆ ಮುರಿತದ ಸರಿಪಡಿಸುವಿಕೆ.
►ಒಳರೋಗಿಗಳಿಗೆ ಔಷಧಿ ಉಚಿತವಾಗಿರುತ್ತದೆ (ಶಸ್ತ್ರ ಚಿಕಿತ್ಸೆಗೆ ಬಳಸುವ ಸಾಧನಗಳ ವೆಚ್ಚವನ್ನು ರೋಗಿಗಳೇ ಭರಿಸಬೇಕು)
►ಲ್ಯಾಬೊರೇಟರಿ ಪರೀಕ್ಷೆಗಳು ಶೇ. 50 ರಿಯಾಯಿತಿ ನೀಡಲಾಗುವುದು.
►ಇಸಿಜಿ ಉಚಿತವಾಗಿರುತ್ತದೆ.
►ಎದೆಯ ಎಕ್ಸ್ ರೇ ಉಚಿತವಾಗಿ ಮಾಡಲಾಗುವುದು.
►ರೇಡಿಯೋಲಜಿ ಪರೀಕ್ಷೆಗಳಿಗೆ ಶೇ.50 ರಿಯಾಯುತಿ ನೀಡಲಾಗುವುದು.
ಸೂಚನೆ: ಈ ಉಚಿತ ಶಸ್ತ್ರ ಚಿಕಿತ್ಸೆಗಳು ಮೊದಲ 250 ರೋಗಿಗಳಿಗೆ ಸಾಮಾನ್ಯವಾರ್ಡಿನಲ್ಲಿ ಕನಿಷ್ಠ 8ದಿನಗಳವರೆಗೆ ಒಳರೋಗಿಯಾಗಿ ದಾಖಲಾಗುವವರಿಗೆ ಮಾತ್ರ ಅನ್ವಯಿಸುತ್ತದೆ. ಶಸ್ತ್ರ ಚಿಕಿತ್ಸೆಗೆ ಸಂಬಂದಿಸಿದ ಔಷಧಿಗಳು ಉಚಿತವಾಗಿರುತ್ತದೆ. ಶಸ್ತ್ರ ಚಿಕಿತ್ಸೆಯ ಸಂದರ್ಭದಲ್ಲಿ ಬಳಸುವ ಸಾಧನಗಳು ಹಾಗೂ ದೇಹದ ಒಳಗಡೆ ಅಳವಡಿಸುವ ಸಾಧನಗಳ (ಹೊಲಿಗೆ ವಸ್ತುಗಳು, ಇಂಪ್ಲಾಂಟ್,ಮೆಶ್, ಲೆನ್ಸ್ ಇತ್ಯಾದಿ) ವೆಚ್ಚಗಳನ್ನು ಮತ್ತು ಆಸ್ಪತ್ರೆಯ ಹೊರಗಡೆ ಲ್ಯಾಬ್‌ಗಳಲ್ಲಿ ನಡೆಸುವ ಟೆಸ್ಟುಗಳ ವೆಚ್ಚಗಳನ್ನು ರೋಗಿಗಳೆ ಭರಿಸಬೇಕು. ಶಸ್ತ್ರ ಚಿಕಿತ್ಸೆಯ ನಂತರದ ಸೇವೆಯು ಉಚಿತವಾಗಿರುತ್ತದೆ. ಈ ಅವಧಿಯಲ್ಲಿ ತೀವ್ರ ನಿಗಾ ವಿಭಾಗ ಮತ್ತು ನವಜಾತ ಮಕ್ಕಳ ತೀವ್ರ ನಿಗಾ ವಿಭಾಗದಲ್ಲಿ ಯಾವುದೇ ರೀತಿಯ ಉಚಿತ ಸೌಲಭ್ಯಗಳು ಇರುವುದಿಲ್ಲ. ಸಾಮಾನ್ಯ ವಾರ್ಡಿನಲ್ಲಿ ವೈದ್ಯರ ಶುಲ್ಕ, ದಾದಿಯರ ಸೇವೆ, ಊಟ, ಹಾಸಿಗೆ ಉಚಿತವಾಗಿರುತ್ತದೆ. ಮಾಹಿತಿಗಾಗಿ 7353774782/9448859080/7349479888ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.