ಅಯ್ಯಪ್ಪ ದೊರೆ ಕೊಲೆ ಪ್ರಕರಣ: ಮತ್ತೆ ಮೂವರ ಬಂಧನ
ಬೆಂಗಳೂರು, ನ.1: ಅಲಯನ್ಸ್ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ.ಅಯ್ಯಪ್ಪ ಅವರ ಕೊಲೆ ಕೃತ್ಯದಲ್ಲಿ ಭಾಗಿಯಾಗಿದ್ದ ಆರೋಪದಡಿ ಮೂವರನ್ನು ಇಲ್ಲಿನ ಆರ್‌ಟಿ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಜೆಸಿ ನಗರದ ಮಂಜುನಾಥ್(26), ಮುನಿರೆಡ್ಡಿಪಾಳ್ಯದ ಶ್ರೀನಿವಾಸ್(18) ಹಾಗೂ ಆನೇಕಲ್‌ನ ಮಹೇಂದ್ರ(31) ಎಂದು ತಿಳಿದುಬಂದಿದೆ.
ಆರೋಪಿಗಳಲ್ಲಿ ಮಂಜುನಾಥ ಹಾಗೂ ಶ್ರೀನಿವಾಸ ಎಂಬುವರು ಅಯ್ಯಪ್ಪ ದೊರೆ ಅವರ ಕೊಲೆಗೈಯುವ ವೇಳೆ ಪ್ರಮುಖ ಆರೋಪಿ ಸೂರಜ್ ಸಿಂಗ್‌ನ ಜತೆಯಲ್ಲಿದ್ದರು ಎನ್ನಲಾಗಿದೆ. ಮತ್ತೋರ್ವ ಆರೋಪಿ ಮಹೇಂದ್ರ ದೂರದಲ್ಲಿ ನಿಂತು ಯಾರಾದರೂ ಬಂದು ಹೋಗುವ ಮಾಹಿತಿಯನ್ನು ನೀಡುತ್ತಿದ್ದ ಎನ್ನುವುದು ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.
ಈ ಸಂಬಂಧ ಇದುವರೆಗೂ 13 ಮಂದಿ ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರೆಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Next Story