ಮ್ಯೂಸಿಕ್ ಪ್ರಿಯರಿಗಾಗಿ ಹೊಸ ಆ್ಯಪ್ ‘ರಿಯಾಝ್’
ಬೆಂಗಳೂರು ಮೂಲದ ಮ್ಯೂಸಿಕ್ ಟೆಕ್ ಸ್ಟಾರ್ಟ್‌ಅಪ್ ಮ್ಯೂಸಿಕ್ ಮುನಿ ಲ್ಯಾಬ್ಸ್ ‘ರಿಯಾಝ್ (Riyaz)’ ಎಂಬ ಎಐ ಮತ್ತು ಎಂಎಲ್ ಬೆಂಬಲಿತ ಮ್ಯೂಸಿಕ್ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದೆ. ಈಗಾಗಲೇ ಆಂಡ್ರಾಯ್ಡ್ ನಲ್ಲಿ ಸುಮಾರು 15 ಲಕ್ಷ ಜನ ಇನ್ಸ್ಟಾಲ್ ಮಾಡಿರುವ ಈ ಆ್ಯಪ್ ಈಗ ಐಫೋನ್ ಬಳಕೆದಾರರಿಗೆ ಲಭ್ಯವಾಗಿದೆ.
ಈ ಆ್ಯಪ್ ಮೂಲಕ ಸಂಗೀತ ಪ್ರಿಯರು ತಕ್ಷಣದ ಪ್ರತಿಕ್ರಿಯೆ ಹಾಗೂ ನೇರ ದೃಶ್ಯೀಕರಣದೊಂದಿಗೆ ಸಂಗೀತವನ್ನು ಅಭ್ಯಾಸ ಮಾಡಬಹುದಾಗಿದೆ. ಸಂಗೀತ ಶಿಕ್ಷಕರ ಹುಡುಕಾಟ, ಅದಕ್ಕೆ ತಗಲುವ ವೆಚ್ಚ ಹಾಗೂ ಸಮಯದ ಹೊಂದಾಣಿಕೆ ಆಗದೆ ಬಹುತೇಕರು ಸಂಗೀತದ ಆಸಕ್ತಿಯಿದ್ದರೂ ಅದನ್ನು ಕಲಿಯುವುದರಿಂದ ದೂರ ಉಳಿಯುತ್ತಾರೆ. ಆದರೆ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸಿ ಸಂಗೀತ ಕಲಿಯಲು ವೇದಿಕೆಯನ್ನು ಕಲ್ಪಿಸುತ್ತದೆ ಈ ಹೊಸ ಆ್ಯಪ್ .
ಈ ಮೊಬೈಲ್ ಆ್ಯಪ್ ಶಾಸ್ತ್ರೀಯ ಸಂಗೀತ ಕಲಿಯಲು ಕೂಡಾ ವೇದಿಕೆಯಾಗಿದ್ದು, ಸಂಗೀತ ಶಿಕ್ಷಕರಿಗೂ ಜಾಗತಿಕವಾಗಿ ಆದಾಯದ ಮಾರ್ಗವನ್ನು ತೆರೆದಿದೆ. ಸದ್ಯ ರಿಯಾಝ್ ಆಂಡ್ರಾಯ್ಡ್ ಆ್ಯಪ್ ಜಗತ್ತಿನಾದ್ಯಂತ 1.5 ಮಿಲಿಯನ್ ಬಳಕೆದಾರರನ್ನು ಹೊಂದಿದ್ದು, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಪಾಶ್ಚಾತ್ಯ ಸಾಶ್ತ್ರೀಯ ಸಂಗೀತ ಕೋರ್ಸ್‌ಗಳನ್ನು ಬಳಕೆದಾರರಿಗೆ ಒದಗಿಸುತ್ತಿದೆ ಎಂದು ಮ್ಯೂಸಿಕ್ ಮುನಿ ಸ್ಟಾರ್ಟ್‌ಅಪ್‌ನ ಸಹ ಸಂಸ್ಥಾಪಕ ಅಲಹಂ ಅನಿಲ್ ಕುಮಾರ್ ತಿಳಿಸಿದ್ದಾರೆ.
ಗೋಪಾಲ ಹಾಗೂ ಪ್ರೊ. ಝೇವಿಯರ್ ಸೆರಾ ಈ ಆ್ಯಪ್ ನ್ನು ರೂಪಿಸಿದವರು. ಹೆಚ್ಚಿನ ಮಾಹಿತಿಗೆ: musicmuni.com