‘ಚೈನೀಸ್ ಪೀಪಲ್ಸ್ ರಿಪಬ್ಲಿಕ್’ ಪಕ್ಷದ ಘೋಷಣೆ
ಈ ದಿನ
1900: ಕ್ಯೂಬಾದಲ್ಲಿ ಪೀಪಲ್ಸ್ ಪಾರ್ಟಿ ಸ್ಥಾಪನೆಯಾಯಿತು.
1931: ಕ್ರಾಂತಿಕಾರಿ, ಕಮ್ಯುನಿಸ್ಟ್ ನಾಯಕ ಮಾವೊ ಝೆಡಾಂಗ್ ತಮ್ಮ ಪಕ್ಷ ‘ಚೈನೀಸ್ ಪೀಪಲ್ಸ್ ರಿಪಬ್ಲಿಕ್’ ಅನ್ನು ಘೋಷಣೆ ಮಾಡಿದರು.
1983: ಅಮೆರಿಕದ ಸೆನೆಟ್ ಕಟ್ಟಡದಲ್ಲಿ ಬಾಂಬೊಂದು ಸ್ಫೋಟಗೊಂಡಿತು. ‘ರೆಸಿಸ್ಟನ್ಸ್ ಕಾನ್‌ಸ್ಪಿರಸಿ’ ಎಂಬ ಉಗ್ರಗಾಮಿ ಗುಂಪು ಈ ಕೃತ್ಯದ ಹೊಣೆ ಹೊತ್ತುಕೊಂಡಿತು. ಗ್ರೆನೆಡಾ ಮತ್ತು ಲೆಬನಾನ್ ದೇಶಗಳ ಆಂತರಿಕ ವಿಷಯದಲ್ಲಿ ಅಮೆರಿಕ ಸೇನೆ ಭಾಗಿಯಾಗುವುದನ್ನು ವಿರೋಧಿಸಿ ಈ ಕೃತ್ಯ ನಡೆಸಲಾಗಿತ್ತು ಎಂದು ಈ ಗುಂಪು ಹೇಳಿಕೊಂಡಿತು.
1989: ಪಶ್ಚಿಮ ಜರ್ಮನಿಯಲ್ಲಿ ನಡೆದ ಸರಕಾರದ ವಿರುದ್ಧದ ಪ್ರತಿಭಟನೆಗೆ ಮಣಿದು ಆಡಳಿತಾರೂಢ ಕಮ್ಯುನಿಸ್ಟ್ ಪ್ರಾಬಲ್ಯದ ಸರಕಾರ ರಾಜೀನಾಮೆ ನೀಡಬೇಕಾಯಿತು.
2000: ಖ್ಯಾತ ಲೇಖಕಿ ಕೆನಡಾದ ಮಾರ್ಗರೆಟ್ ಅಟ್‌ವುಡ್ ತಮ್ಮ ಕಾದಂಬರಿ ‘ದ ಬ್ಲೈಂಡ್ ಅಸ್ಸಾಸ್ಸಿನ್’ಗೆ ಸಾಹಿತ್ಯದ ನೊಬೆಲ್ ಪುರಸ್ಕಾರ ಪಡೆದರು.
2002: ಇರಾನ್ ತನ್ನ ದೇಶದ ಟಿವಿಯಲ್ಲಿ ಕಾಣಿಸಿಕೊಳ್ಳುವ ಅಮೆರಿಕ ಮೂಲದ ಕಂಪೆನಿಗಳ ಜಾಹೀರಾತುಗಳನ್ನು ನಿಷೇಧಗೊಳಿಸಿತು.
2012: ಗ್ವಾಟೆಮಾಲಾದಲ್ಲಿ ರಿಕ್ಟರ್ ಮಾಪಕದಲ್ಲಿ 7.3 ಕಂಪನಾಂಕಗಳಲ್ಲಿದ್ದ ಪ್ರಬಲ ಭೂ ಕಂಪಕ್ಕೆ 48 ಜನರು ಬಲಿಯಾದರು.
2015: ಮಾರಣಾಂತಿಕ ಎಬೋಲಾ ಸೋಂಕಿ ನಿಂದ ಸಿಯೆರ್ರಾ ಲಿಯೋನ್ ದೇಶವು ಸಂಪೂರ್ಣ ಮುಕ್ತವಾಗಿದೆಯೆಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿತು. ಎಬೋಲಾದಿಂದ ಈ ದೇಶದಲ್ಲಿ ಸುಮಾರು 4,000 ಜನರು ಮೃತಪಟ್ಟರು.
1858: ಸ್ವಾತಂತ್ರ ಹೋರಾಟಗಾರ ಬಿಪಿನ್ ಚಂದ್ರಪಾಲ್ ಜನ್ಮದಿನ.
1888: ಭಾರತದ ಖ್ಯಾತ ವಿಜ್ಞಾನಿ, ನೊಬೆಲ್ ಪ್ರಶಸ್ತಿ ಪುರಸ್ಕೃತ ಸರ್ ಸಿ.ವಿ.ರಾಮನ್ ಜನ್ಮದಿನ.